ಫೀಫಾ ಶ್ರೇಯಾಂಕ‌‌: ಆರು ಸ್ಥಾನ ಬಡ್ತಿ ಪಡೆದ ಭಾರತ

ಶುಕ್ರವಾರ, 29 ನವೆಂಬರ್ 2013 (16:19 IST)
PIB
ಅಂತರಾಷ್ಟ್ರೀಯ ಪುಟ್ಬಾಲ್‌ ಮೈತ್ರಿ ಪಂದ್ಯದಲ್ಲಿ ಭಾರತ ತನ್ನ ಎರುರಾಳಿ ತಂಡವಾದ ಫಿಲಿಫೈನ್ಸ್‌ ವಿರುದ್ದ 1-1 ಅಂತರದಿಂದ ಡ್ರಾ ಮಾಡಿದೆ ಮತ್ತು ನೇಪಾಳದ ವಿರುದ್ದ 2-1 ಅಂತರದಿಂದ ಗೆಲ್ಲುವ ಮೂಲಕ ಫೀಫಾ ಶ್ರೇಯಾಂಕದಲ್ಲಿ 6 ಸ್ಥಾನ ಮೇಲೆ ಬಂದಿದೆ

ಅಂತಾರಾಷ್ಟ್ರೀಯ ಮೈತ್ರಿ ಪಂದ್ಯದಲ್ಲಿ ಭಾರತಕ್ಕೆ ಇದು ಮೊದಲ ಜಯವಾಗಿದೆ. ಭಾರತ ಈಗ ಆರು ಸ್ಥಾನ ಮೇಲೆ ಬಂದು ಶ್ರೇಯಾಂಕದಲ್ಲು 154 ರಿಂದ 148 ನೇ ಸ್ಥಾನಕ್ಕೆ ತಲುಪಿದೆ . ಭಾರತಕ್ಕೆ ಈಗ 149 ಅಂಕಗಳು ಲಭಿಸಿದೆ. ಏಷ್ಯಾದಲ್ಲಿ ಭಾರತ 27ನೇ ಸ್ಥಾನಕ್ಕೆ ತಲುಪಿದೆ. ಇರಾನ್‌ ನಾಲ್ಕು ಸ್ಥಾನ ಮೇಲೆ ಬಂದು ಅಗ್ರಸ್ಥಾನದಲ್ಲಿ ಇದ್ದರೇ, ಜಪಾನ್ ಎರಡನೇ ಸ್ಥಾನಕ್ಕೆ ತಲುಪಿದೆ ಮತ್ತು ಆದರೆ ಜಪಾನ್ ವಿಶ್ವದ ಶ್ರೇಯಾಂಕದಲ್ಲಿ 4 ಸ್ಥಾನ ಕುಸಿತ ಕಂಡಿದೆ. ದಕ್ಷಿಣ ಕೊರಿಯಾ ಮೂರನೇ ಸ್ಥಾನದಲ್ಲಿದೆ ಮತ್ತು ಆಷ್ಟ್ರೇಲಿಯಾ ನಾಲ್ಕನೇ ಸ್ಥಾನದಲ್ಲಿದೆ.

ವಿಶ್ವ ಶ್ರೇಯಾಂಕದಲ್ಲಿ ಸ್ಪೇನ್, ಜರ್ಮನ್, ಅರ್ಜಂಟೈನಾ ಮತ್ತು ಕೊಲಂಬಿಯಾ ಅಗ್ರ ನಾಲ್ಕನೇ ಸ್ಥಾನದಲ್ಲಿವೆ. ಪೊರ್ಚ್‌ಗಲ್‌ 9ನೇ ಸ್ಥಾನದಿಂದ ಜಿಗಿದು 5ನೇ ಸ್ಥಾನಕ್ಕೆ ತಲುಪಿದೆ. ಮುಂದಿನ ವಿಶ್ವಕಪ್‌ನ ಆತಿಥ್ಯ ವಹಿಸಿಕೊಂಡ ಬ್ರೇಜಿಲ್‌ ಒಂದು ಸ್ಥಾನದಲ್ಲಿ ಮುಂದೆ ಬಂದು 10ನೇ ಸ್ಥಾನದಲ್ಲಿ ಇದೆ. ಬೆಲ್ಜಿಯಂ ಮತ್ತು ಇಂಗ್ಲೆಂಡ್ ಮೂರು ಸ್ಥಾನ ಕೆಳಗೆ ಕುಸಿಯುವುದರ ಮೂಲಕ ಟಾಪ್ 10 ಸ್ಥಾನದಿಂದ ಕೆಳಗಡೆ ಬಂದು, ಬೆಲ್ಜಿಯಂ 11ನೇ ಮತ್ತು ಇಂಗ್ಲೆಂಡ್ 13ನೇ ಸ್ಥಾನದಲ್ಲಿ ಇವೆ .

ವೆಬ್ದುನಿಯಾವನ್ನು ಓದಿ