ಫುಟ್ಬಾಲ್ : ಎಐಎಫ್ಎಫ್‌‌ನ ಸರ್ವಶ್ರೇಷ್ಟ ಆಟಗಾರ ಪ್ರಶಸ್ತಿ ಪಡೆದ ಸುನೀಲ್‌ ಛೇತ್ರಿ

ಗುರುವಾರ, 13 ಫೆಬ್ರವರಿ 2014 (16:24 IST)
PR
ನವದೆಹಲಿ: ಅಖಿಲ ಭಾರತ ಫುಟ್ಬಾಲ್‌‌ ಮಹಾಸಂಘ ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾರತೀಯ ಫುಟ್ಬಾಲ್‌‌ ತಂಡದ ನಾಯಕ ಸುನೀಲ್‌ ಛೆತ್ರಿಯವರಿಗೆ 2013 ರ ಸಾಲಿನ ಸರ್ವಶ್ರೇಷ್ಠ ಆಟಗಾರ ಎನ್ನುವ ಪ್ರಶಸ್ತಿ ನೀಡಲಾಗಿದೆ.

ಐಲೀಗ್‌ನ ಎಲ್ಲಾ ಕ್ಲಬ್‌‌ಗಳ ಕೋಚ್‌‌ಗಳ ಮತದಾನದಿಂದ ಛೇತ್ರಿ ಆಯ್ಕೆಯಾಗಿದ್ದಾರೆ. ಈ ಸಲ ಒಟ್ಟು 7 ಪ್ರಶಸ್ತಿಗಳನ್ನು ನೀಡಲಾಗಿದೆ. ಇದರಲ್ಲಿ 5 ಪ್ರಶಸ್ತಿಗಳನ್ನು ಮೊದಲ ಬಾರಿಗೆ ನೀಡಲಾಗುತ್ತಿದೆ. ವಾರ್ಷಿಕ ಸಮಾರೋಪದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಎಐಎಫ್‌ಎಫ್‌ನ 2013 ವರ್ಷದ ಸರ್ವಶ್ರೇಷ್ಠ ಆಟಗಾರ ಸುನೀಲ್ ಛೆತ್ರಿ , ಎಐಎಫ್ಎಫ್‌ 2013 ರ ಸರ್ವ ಶ್ರೇಷ್ಠ ಮಹಿಳಾ ಆಟಗಾರ್ತಿ ಓಯಿನಾಮ ಬೆಮ್‌‌ಬೆಮ್‌ ದೇವಿ, ಎಐಎಫ್‌ಎಫ್‌‌ನ 2013 ಸಾಲಿನ ಉದಯೋನ್ಮುಖ ಆಟಗಾರ ಜೆ.ಜೆ.ಲೆಲಪುಕುಲ್ವಾ ಕೆಳಸ್ಥರದ ಸರ್ವ ಶ್ರೇಷ್ಠ ವಿಕಾಸ ಕಾರ್ಯಕ್ರಮ ಪ್ರಶಸ್ತಿ ಮಿಜೋರಾಂ ಫುಟ್ಬಾಲ್‌ ಸಂಘ , ಭಾರತೀಯ ಫುಟ್ಬಾಲ್ ನಲ್ಲಿ ಧೀರ್ಘ ಕಾಲದವರೆಗೆ ಕಾಣಿಕೆ ನೀಡಿದ ಪ್ರಶಸ್ತಿ ಟಾಟಾ ಫುಟ್ಬಾಲ್‌‌ ಅಕಾಡೆಮಿ, ಎಐಎಫ್‌ಎಫ್‌‌ನ 2013 ವರ್ಷದ ಸರ್ವಶ್ರೇಷ್ಠ ರೆಫ್ರಿ ಪ್ರತಾಪ್‌ ಸಿಂಗ್‌ , ಎಐಎಫ್‌‌ಎಫ್‌‌ನ 2013 ಸಾಲಿನ ವರ್ಷದ ಸರ್ವಶ್ರೇಷ್ಠ ಸಹಾಯಕ ರೆಫ್ರಿ ಬಿಪ್ಬಲಬ್‌ ಪೊದ್ದಾರ್‌ಗೆ ಪ್ರಶಸ್ತಿ ಲಭಿಸಿವೆ ಎಂದು ಎಐಎಫ್‌‌ಎಫ್‌ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ