ಫುಟ್ಬಾಲ್: ಕೋಲ್ಕತಾದಲ್ಲಿ ಲಯೋನೆಲ್ ಮೆಸ್ಸಿ ಮೇನಿಯಾ

ಬುಧವಾರ, 31 ಆಗಸ್ಟ್ 2011 (09:31 IST)
ಅರ್ಜಿಂಟಿನಾ ಮತ್ತು ವೆನೆಜುವೆಲಾ ಮಧ್ಯೆ ನಡೆಯಲಿರುವ ಸ್ನೇಹಪರ ಪಂದ್ಯಕ್ಕಾಗಿ ವಿಶ್ವವಿಖ್ಯಾತ ಫುಟ್ಬಾಲ್ ಆಟಗಾರ ಲಯೋನೆಲ್ ಮೆಸ್ಸಿ ಕೋಲ್ಕತಾಗೆ ಆಗಮಿಸಿದ್ದರಿಂದ ಫುಟ್ಬಾಲ್ ಅಭಿಮಾನಿಗಳು ಮೆಸ್ಸಿ ಮೇನಿಯಾಗೆ ಒಳಗಾಗಿದ್ದಾರೆ.

ಮುಂದಿನ ತಿಂಗಳು ಸೆಪ್ಟೆಂಬರ್ 2 ರಂದು ಅರ್ಜಿಂಟಿನಾ ಮತ್ತು ವೆನೆಜುವೆಲಾ ಮಧ್ಯೆ ಸ್ನೇಹಪರ ಪಂದ್ಯ ನಡೆಯಲಿದೆ ಎಂದು ಆಯೋಜಕ ಮೂಲಗಳು ತಿಳಿಸಿವೆ.

ಕೋಲ್ಕತಾದಲ್ಲಿ ಫುಟ್ಬಾಲ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ, ನಗರಾದ್ಯಂತ ಲಯೋನೆಲ್ ಮೆಸ್ಸಿಯವರ ಪ್ರಭಾವ ಕಂಡುಬರುತ್ತಿದೆ. ಹಿಂದೆ ಫುಟ್ಬಾಲ್ ದಂತಕತೆಯಾದ ಡಿಯಾಗೋ ಮರಡೋನಾ ನಗರಕ್ಕೆ ಆಗಮಿಸಿದಾಗ ಕೂಡಾ ಭರ್ಜರಿ ಸ್ವಾಗತ ದೊರೆತಿತ್ತು.

ನಗರದ ಬಡಾವಣೆಗಳಲ್ಲಿ ಲಯೋನೆಲ್ ಮೆಸ್ಸಿಯವರ ಭಾವಚಿತ್ರಗಳನ್ನು ಪೋಸ್ಟರ್‌ಗಳನ್ನು ಅಂಟಿಸಿದ್ದಲ್ಲದೇ ಭಾರಿ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಅರ್ಜಿಂಟಿನಾ ತಂಡ ವಿಳಂಬವಾಗಿ ಆಗಮಿಸಿದ ಲಯೋನೆಲ್ ಮೆಸ್ಸಿಯವರನ್ನು ಸ್ವಾಗತಿಸಿದ್ದಾರೆ.

ಆಪಾರ ಸಂಖ್ಯೆಯ ಕ್ರೀಡಾಭಿಮಾನಿಗಳಿಂದ ಯಾವುದೇ ಘಟನೆ ಸಂಭವಿಸದಂತೆ, ಅರ್ಜಿಂಟಿನಾ ತಂಡಕ್ಕೆ ಭಾರಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ