ಫುಟ್ಬಾಲ್ : ಬಾಂಗ್ಲಾದೊಂದಿಗೆ ಸ್ನೇಹಿ ಪಂದ್ಯವಾಡಲಿರುವ ಭಾರತ

ಗುರುವಾರ, 13 ಫೆಬ್ರವರಿ 2014 (16:24 IST)
PR
ನವದೆಹಲಿ: ಭಾರತೀಯ ಪುಟ್ಬಾಲ್‌ ತಂಡ ಬಾಂಗ್ಲಾದೇಶದ ಜೊತೆ ಮಾರ್ಚ್ 5ರಂದು ಗೋವಾದಲ್ಲಿ ಸ್ನೇಹಿ ಪಂದ್ಯವನ್ನು ಆಡಲಿದೆ. ಈ ಪಂದ್ಯ ಭಾರತದ ಈ ವರ್ಷದ ಮೊದಲ ಅಂತಾರಾಷ್ಟ್ರೀಯ ಸ್ನೇಹಿ ಪಂದ್ಯ ಇದಾಗಿದೆ. ಎಂದು ಆಲ್‌ ಇಂಡಿಯಾ ಫುಟ್ಬಾಲ್‌‌ ಫೆಡರೇಶನ್‌‌‌ ತಿಳಿಸಿದೆ.

ಮಾರ್ಚ್ 5 ರಂದು ಫಿಫಾ ಸ್ನೇಹಿ ಪಂದ್ಯದ ದಿನವಾಗಿದೆ. ಬಾಂಗ್ಲಾ ದೇಶದ ಮತ್ತು ಭಾರತ ಇಲ್ಲಿಯವರೆಗೆ ಒಟ್ಟು 30 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದೆ. ಇದರಲ್ಲಿ ಭಾರತ ಒಟ್ಟು 17 ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿದೆ. ಬಾಂಗ್ಲಾದೇಶ ಒಟ್ಟು 5 ಪಂದ್ಯಗಳಲ್ಲಿ ಜಯವನ್ನು ಗಳಿಸಿತ್ತು, 8 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿದ್ದವು.

2013ರಲ್ಲಿ ಕಾಠ್ಮಂಡುವಿನಲ್ಲಿ ನಡೆದ ಸಾಫ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಎರಡು ತಂಡಗಳು ಮುಖಾಮುಖಿಯಾಗಿದ್ದವು. ಆದರೆ, ಪಂದ್ಯ 1-1 ಡ್ರಾದಲ್ಲಿ ಅಂತ್ಯಗೊಂಡಿತ್ತು.

ವೆಬ್ದುನಿಯಾವನ್ನು ಓದಿ