ಫುಟ್ಬಾಲ್: ಸ್ಪೇನ್ ತಂಡಕ್ಕೆ ಕಾನ್ಫೆಡರೇಷನ್‌ ಕಪ್‌ ಪ್ರಶಸ್ತಿ

ಶನಿವಾರ, 29 ಜೂನ್ 2013 (13:33 IST)
PTI
ತುದಿಗಾಲ ಮೇಲೆ ನಿಲ್ಲಿಸಿದ್ದ ರೋಚಕ ಪೆನಾಲ್ಟಿ ಶೂಟೌಟ್‌ನಲ್ಲಿ ಇಟಲಿ ತಂಡವನ್ನು ಬಗ್ಗುಬಡಿದ ವಿಶ್ವ ಚಾಂಪಿಯನ್‌ ಸ್ಪೇಯ್ನ ಕಾನ್ಫೆಡರೇಷನ್‌ ಕಪ್‌ ಫ‌ುಟ್ಬಾಲ್‌ ಪಂದ್ಯಾವಳಿಯಲ್ಲಿ ಪ್ರಶಸ್ತಿ ಸುತ್ತು ತಲುಪಿದೆ.

ಗುರುವಾರ ತಡರಾತ್ರಿ ನಡೆದ ಎರಡನೇ ಸೆಮಿಫೈನಲ್‌ ಪಂದ್ಯ ಹೆಚ್ಚುವರಿ ಆಟದ ಅನಂತರವೂ ಗೋಲು ರಹಿತ ಡ್ರಾದಲ್ಲಿ ಅಂತ್ಯಗೊಂಡಿತು. ಇಟಲಿ ತಂಡ ಲಿಯಾನಾರ್ಡೊ ಬೊನುಸಿ ಪೆನಾಲ್ಟಿಯ 13ನೇ ಶೂಟೌಟ್‌ನಲ್ಲಿ ವಿಫ‌ಲವಾಗಿದ್ದು ದುಬಾರಿಯಾದರೆ, ಸ್ಪೇಯ್ನ ತಂಡದ ಜೀಸಸ್‌ ನೆವಾಸ್‌ ನಿರ್ಣಾಯಕ ಗೋಲು ಸಿಡಿಸಿ ಗೆಲುವಿನ ರೂವಾರಿಯಾದರು. ಶೂಟೌಟ್‌ನಲ್ಲಿ 7-6ರಿಂದ ಇಟಲಿಯನ್ನು ಬಗ್ಗುಬಡಿದ ಸ್ಪೇಯ್ನ ಫೈನಲ್‌ನಲ್ಲಿ ಆತಿಥೇಯ ಬ್ರಝಿಲ್‌ ತಂಡವನ್ನು ಎದುರಿಸಲಿದೆ. ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಉರುಗ್ವೆ-ಇಟಲಿ ಮುಖಾಮುಖೀ ಆಗಲಿದೆ.

ವಿಶ್ವ ಚಾಂಪಿಯನ್‌, ಯುರೋಪಿಯನ್‌ ಚಾಂಪಿಯನ್‌ ಹಾಗೂ ಒಲಿಂಪಿಕ್‌ ಚಿನ್ನದ ಪದಕ ಕೂಡ (1992, ಬಾರ್ಸಿಲೋನಾ) ಗೆದ್ದಿರುವ ಸ್ಪೇಯ್ನಇದೀಗ ಕಾನೆ#ಡರೇಷನ್‌ ಕಪ್‌ ಕೂಡ ಗೆಲ್ಲುವ ವಿಶ್ವಾಸದಲ್ಲಿದೆ.

ಕಳೆದ ವರ್ಷ ಕೀವ್‌ನಲ್ಲಿ ನಡೆದ ಯುರೋಕಪ್‌ ಫೈನಲ್‌ನಲ್ಲಿ 0-4ರಿಂದ ಸೋಲುಂಡಿದ್ದ ಇಟಲಿ ಈ ಬಾರಿ ಸರಿಸಮ ಹೋರಾಟ ನೀಡಿತು. ಪಂದ್ಯದ ಅಂತ್ಯದವರೆಗೂ ಗೋಲು ಬಾರಿಸದೇ ಇದ್ದರೂ ಸ್ಪೇಯ್ನಗೆ ಗೋಲು ನೀಡಲಿಲ್ಲ.

ವೆಬ್ದುನಿಯಾವನ್ನು ಓದಿ