ಫೆಡರರ್‌ಗೆ 2007ರ ಉತ್ತಮ ಆಟಗಾರ ಪ್ರಶಸ್ತಿ

ಬುಧವಾರ, 14 ನವೆಂಬರ್ 2007 (12:36 IST)
ಜಗತ್ತಿನ ನಂ 1 ಆಟಗಾರ ರೋಜರ್ ಫೆಡರರ್ ಅವರನ್ನು 2007 ರ ಸಾಲಿನ ಉತ್ತಮ ಆಟಗಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರೋಜರ್ ಫೆಡರರ್ ಅವರ ಸಂಪ್ರಾದಾಯಕ ಎದುರಾಳಿ ರಾಫೆಲ್ ನಾಡೆಲ್ ಅವರನ್ನು ಕಳೆದ ತಿಂಗಳು ತವರಿನಲ್ಲಿ ಸೋಲಿಸಿ ಫೆಡರರ್ ಗೆಲುವು ಸಾಧಿಸಿದ್ದರು.

ಸೋಮವಾರದಂದು ಮಾಸ್ಟರ್ಸ್ ಕಪ್ ಪಂದ್ಯಾವಳಿಯಲ್ಲಿ ಚಿಲಿಯ ಆಟಗಾರ ಫರ್ನಾಂಡೊ ಅವರಿಂದ ಫೆಡರರ್ ಸೋಲಿನ ಆಘಾತ ಎದುರಿಸಿದ್ದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಫೆಡರರ್ ಈ ವರ್ಷ ವಿಶೇಷವಾಗಿದ್ದು, ನಡಾಲ್ ಅವರನ್ನು ಸೋಲಿಸಿ ಮುಂದೆ ಸಾಗಿದ್ದೆನೆ ಎಂದು ಹೇಳಿದ್ದಾರೆ.

ಸತತ ನಾಲ್ಕು ವರ್ಷಗಳಿಂದ ಜಗತ್ತಿನ ನಂಬರ್ ಒನ್ ಆಟಗಾರನಾಗಿ ಮುಂದುವರೆಯುತ್ತಿರುವುದು ಸಂತಸ ತಂದಿದೆ 2008 ರಲ್ಲಿ ನಂಬರ್ ಒನ್ ಸ್ಥಾನ ಉಳಿಸಿಕೊಳ್ಳಲು ಹೋರಾಟ ನಡೆಸುತ್ತೆನೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ