ಫ್ರೆಂಚ್ ಓಪನ್: ಸೈನಾ ನೆಹ್ವಾಲ್ ಶುಭಾರಂಭ

ಗುರುವಾರ, 27 ಅಕ್ಟೋಬರ್ 2011 (10:44 IST)
PTI
ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮೊದಲ ಸುತ್ತಿನ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಸೈನಾ ನೆಹ್ವಾಲ್ ಜಯಗಳಿಸಿ ಶುಭಾರಂಭ ಮಾಡಿದ್ದಾರೆ.

ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ್ತಿ ಸೈನಾ, ಮೊದಲ ಸುತ್ತಿನ ಪಂದ್ಯದಲ್ಲಿ ತಮ್ಮ ಹಾಲೆಂಡ್ ಎದುರಾಳಿ ವಿರುದ್ಧ 21-14,21-9 ಸೆಟ್‌ಗಳ ಅಂತರದಿಂದ ಜಯಗಳಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಎರಡೂ ಸೆಟ್‌ಗಳಲ್ಲಿ ಅಕ್ರಮಣಕಾರಿ ಮನೋಭಾವ ಪ್ರದರ್ಶಿಸಿದ ಸೈನಾ, ಕೇವಲ 29 ನಿಮಿಷಗಳ ಅವಧಿಯಲ್ಲಿ ಎದುರಾಳಿಯ ವಿರುದ್ಧ ಜಯಗಳಿಸುವಲ್ಲಿ ಯಶಸ್ವಿಯಾದರು.

ಮುಂದಿನ ಸುತ್ತಿನ ಪಂದ್ಯದಲ್ಲಿ ಸೈನಾ ನೆಹ್ವಾಲ್, ಚೀನಾದ ಜೆಝುಯಿ ಲೀ ಅಥವಾ ಯೊನ್ ಜೂ ಬೇ ವಿರುದ್ಧ ಹಣಾಹಣಿ ನಡೆಸಲಿದ್ದಾರೆ.

ಪುರುಷರ ವಿಭಾಗದಲ್ಲಿ, ಚೇತನ ಆನಂದ್ ಮೊದಲ ಸುತ್ತಿನಲ್ಲಿಯೇ ಗಾಯದಿಂದಾಗಿ ಪಂದ್ಯಾವಳಿಯಿಂದ ನಿರ್ಗಮಿಸಿದರು.

ವೆಬ್ದುನಿಯಾವನ್ನು ಓದಿ