ಬೀಜಿಂಗ್ ಓಲಿಂಪಿಕ್ಸ್:ಲಾಕ್ರಾ ಅರ್ಹತೆ

ಬುಧವಾರ, 31 ಅಕ್ಟೋಬರ್ 2007 (15:00 IST)
ಮುಂದಿನ ವರ್ಷ ಬೀಜಿಂಗ್‍‌ನಲ್ಲಿ ನಡೆಯಲಿರುವ ಓಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಭಾರತೀಯ ಬಾಕ್ಸರ್ ಎ.ಎಲ್. ಲಾಕ್ರಾ ಅರ್ಹತೆಗಳಿಸಿದ್ದು, ರಜತ ಪದಕ ವಿಜೇತ ಯುರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ ಶಾಹಿನ್ ಇಮ್ರಾನೋವ್ ಅವರನ್ನು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪರಾಭವಗೊಳಿಸುವ ಮೂಲಕ ಲಾಕ್ರಾ ಅರ್ಹತೆ ಪಡೆದರು

ಚಿಕಾಗೊದಲ್ಲಿ ನಡೆದಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಷಿಪ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಮ್ರಾನೋವ್ ಅವರಿಗೆ ಸೋಲಿನ ರುಚಿ ತೋರಿಸುವ ಮೂಲಕ ಭಾರತದ ವತಿಯಿಂದ ಬಾಕ್ಸಿಂಗ್‍‌ನಲ್ಲಿ ಲಾಕ್ರಾ ಪಾಲ್ಗೊಳ್ಳುವ ಮೊದಲ ಬಾಕ್ಸರ್‍ ಎಂದು ಖ್ಯಾತಿ ಪಡೆದರು.

ಸೆಮಿಫೈನಲ್ ಹಂತ ಪ್ರವೇಶಿಸಿರುವ ಲಾಕ್ರಾ ಅವರು ಉಪಾಂತ್ಯದಲ್ಲಿ ಚೀನಾದ ಯಾಂಗ್ ಲೀ ವಿರುದ್ಧ ಹಂತಿಮ ಹಂತದ ಪ್ರವೇಶಕ್ಕೆ ಸೆಣಸಲಿದ್ದಾರೆ. ಲಾಕ್ರಾ ಬೀಜಿಂಗ್ ಓಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲು ಅರ್ಹತೆ ಪಡೆದ ನಂತರ ಮಾತನಾಡಿದ ಕೋಚ್ ಗುರಬಕ್ಷ ಸಿಂಗ್ ಅವರು ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿರುವ ಇತರ ಬಾಕ್ಸರುಗಳಾದ ಜಿತೇಂದರ್ (51ಕೆಜಿ) ಮತ್ತು ಜೈ ಭಗವಾನ್ ಸಿಂಗ್ (60) ಕೂಡ ಅರ್ಹತೆಗಳಿಸುವ ಭರವಸೆ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ