ಬೀಜಿಂಗ್ ಓಲಿಂಪಿಕ್‌ಗೆ ಭೂಪತಿ ಲಭ್ಯ

ಸೋಮವಾರ, 24 ಸೆಪ್ಟಂಬರ್ 2007 (13:30 IST)
ಮುಂದಿನ ವರುಷ ಬೀಜಿಂಗ್‌ನಲ್ಲಿ ನಡೆಯಲಿರುವ ಓಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ತಾನು ಪ್ರತಿನಿಧಿಸುವುದಕ್ಕೆ ಲಭ್ಯ ಇರುವುದಾಗಿ ಖ್ಯಾತ ಡಬಲ್ಸ್ ಟೆನಿಸ್ ಪಟು ಮಹೇಶ ಭೂಪತಿ ಅವರು ಪ್ರಕಟಿಸಿದ್ದಾರೆ.

ಕೊಲ್ಕತ್ತಾದಲ್ಲಿ ನಡೆಯುತ್ತಿರುವ ಸನ್‌ಫೀಸ್ಟ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾಗವಹಿಸಲು ಆಗಮಿಸಿರುವ ಅವರು. ಈ ಮೊದಲು ನಾನು ಹೇಳಿದಂತೆ ಓಲಿಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ನಾನು ಸಿದ್ದ. ಆಯ್ಕೆಯ ವಿಚಾರ ಇಂಡಿಯನ್ ಟೆನಿಸ್ ಅಸೋಸಿಯೆಷನ್ ಮತ್ತು ಭಾರತೀಯ ಓಲಿಂಪಿಕ್ ಅಸೋಸಿಯೆಷನ್‌ಗೆ ಬಿಟ್ಟ ವಿಚಾರ ಎಂದು ಭೂಪತಿ ಹೇಳಿದ್ದಾರೆ.

ಸನ್‌‌ಫೀಸ್ಟ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರೇಕ್ಷಕರ ಕೊರತೆಗೆ ಸಾನಿಯಾ ಅನುಪಸ್ಥಿತಿ ಮತ್ತು ಟ್ವೆಂಟಿ 20 ಕ್ರಿಕೆಟ್ ಕಾರಣ. ಭಾರತ ಟ್ವೆಂಟಿ 20ಯಲ್ಲಿ ಉತ್ತಮ ಭರ್ಜರಿ ಆಟ ಪ್ರದರ್ಶಿಸುತ್ತಿರುವುದರಿಂದ ಕ್ರೀಡಾ ಪ್ರೇಮಿಗಳು ಒಲವು ಅತ್ತ ಸರಿದಿದೆ ಎಂದು ಹೇಳಿದರು.
ಭಾರತದಲ್ಲಿ ಮಹಿಳಾ ಟೆನಿಸ್ ಅಷ್ಟಾಗಿ ಬೇಳೆದಿಲ್ಲ. ಹೀಗಾಗಿ ಓಮ್ಮೆಲೆ ಚಾಂಪಿಯನ್‌ಗಳನ್ನು ಹುಟ್ಟು ಹಾಕುವುದು ಸಾಧ್ಯವಿಲ್ಲ.

ವೈಲ್ಡ್ ಕಾರ್ಡ್ ಮೂಲಕ ಪಂದ್ಯಾವಳಿಗಳಿಗೆ ನೇರ ಪ್ರವೇಶ ಪಡೆಯುವವರು ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು. ತಾರಾ ಅಯ್ಯರ್. ಅಂಕಿತಾ ಬಾಂಭ್ರಿ ಅವರಿಗೆ ನೇರ ಪ್ರವೇಶ ಪಡೆದಿದ್ದರು. ಇವರೆಗೆ ಸಾಕಷ್ಟು ಉದಯೋನ್ಮುಕ ಟೆನಿಸ್ ಪ್ರತಿಭೆಗಳಿಗೆ ವೈಲ್ಡ್ ಕಾರ್ಡ್ ನೀಡಿದ್ದೆನೆ ಎಂದು ಅವರು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಟೆನಿಸ್ ಆಟವನ್ನು ಪ್ರಚಾರ ಮಾಡುವ ನಿಮಿತ್ಯ ಟೂರ್ನಿಗಳನ್ನು ಆಯೋಜಿಸುತ್ತಿಲ್ಲ. ಇದರಲ್ಲಿ ನನ್ನ ಲಾಭವೂ ಇದೆ. ಕೇವಲ ಟಿಕೆಟ್ ಮಾರಾಟದಿಂದ ಬರುವ ಲಾಭವನ್ನು ನೆಚ್ಚಿಕೊಳ್ಳುವಂತಿಲ್ಲ. ಪ್ರಾಯೋಜಕತ್ವವನ್ನು ಈ ನಿಟ್ಟಿನಲ್ಲಿ ಪಡೆಯಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ವೆಬ್ದುನಿಯಾವನ್ನು ಓದಿ