ಬ್ರಾತಿಸ್ಲಾವ ಸ್ಕ್ವಾಶ್‌‌ ಟೂರ್ನಮೆಂಟ್‌‌: ಮಹೇಶ ಮನಗಾಂವಕರ್‌‌ಗೆ ಗೆಲುವು

ಮಂಗಳವಾರ, 17 ಡಿಸೆಂಬರ್ 2013 (15:34 IST)
PR
ನವದೆಹಲಿ: ಸ್ಲೋವಾಕಿಯಾದ ರಾಜಧಾನಿ ಬ್ರಾತಿಸ್ಲಾವ್‌ದಲ್ಲಿ ನಡೆದ ಐಎಮ್‌‌‌ಇಟಿ ಓಪನ್‌ ಟೂರ್ನಮೆಂಟ್‌ನಲ್ಲಿ ಭಾರತೀಯ ಯುವ ಸ್ಕ್ವಾಶ್‌‌ ಆಟಗಾರ ಮಹೇಶ ಮನಗಾಂವಕರ್‌ ಗೆಲುವನ್ನು ಸಾಧಿಸಿದ ಮೊದಲ ಆಟಗಾರ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ. ಇದು ಪಿಎಸ್‌‌ಎ ವಿಶ್ವ ಟೂರ್‌‌ ಚಾಲೆಂಜರ್‌‌ನ 5ನೇ ಸ್ಪರ್ಧೆಯಾಗಿದೆ.

19 ವರ್ಷದ ಮತ್ತು ವಿಶ್ವದ 98ನೇ ನಂಬರ್‌ನ ಆಟಗಾರ ಮಹೇಶ್ ಸೆಮಿಫೈನಲ್‌‌ನಲ್ಲಿ ಅಗ್ರ ಶ್ರೇಯಾಂಕಿತ ಚೆಕ್‌‌ ಗಣರಾಜ್ಯದ ಎರಡು ಬಾರಿ ಚಾಂಪಿಯನ್‌‌ ಆದ ಜಾನ್‌ ಕೊಕಲ್‌ರನ್ನು 13-11, 11-8, 9-11, 7-11, 13-11 ಅಂತರದಿಂದ ಸೋಲಿಸಿದ್ದಾರೆ.

ಇದರ ನಂತರ ಮೂರನೇ ಶ್ರೇಯಾಂಕಿತ ಮಹೇಶ ತಮ್ಮ ಎದುರಾಳಿಯಾದ ಗತ ಚಾಂಪಿಯನ್‌ ಮತ್ತು ಸ್ಕಾಟಲೈಂಡ್‌ನ ಎರಡನೇ ಶ್ರೇಯಾಂಕಿತ ಗ್ರೆಗ್‌‌ ಲೋಬಾನ್‌ರನ್ನು ಸೋಲಿ ಗೆಲುವನ್ನು ಪ್ರಶಸ್ತಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈ ಭಾರತೀಯ ಆಟಗಾರ 77 ನಿಮಿಷದಲ್ಲಿ 7-11, 11-8, 11-4, 6-11, 11-7 ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ .

ವೆಬ್ದುನಿಯಾವನ್ನು ಓದಿ