ಬ್ರೆಜಿಲ್ ಪ್ರತಿಭಟನೆ: ಕಾನ್ಫೆಡರೇಷನ್ ಕಪ್ ಫುಟ್ಬಾಲ್ ಪಂದ್ಯ ರದ್ದಾಗೊಲ್ಲ

ಸೋಮವಾರ, 24 ಜೂನ್ 2013 (12:49 IST)
PR
PR
ಬ್ರೆಜಿಲ್ ದೇಶಾದ್ಯಂತಾ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದರೂ, ತವರಿನಲ್ಲಿ ನಡೆಯುತ್ತಿರುವ ಕಾನ್ಫೆಡರೇಷನ್ ಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ರದ್ದುಪಡಿಸುವುದಿಲ್ಲ ಎಂದು ಫೀಫಾ ಆಡಳಿತ ಮಂಡಳಿ ಶನಿವಾರ ಹೇಳಿಕೊಂಡಿದೆ.

ಬ್ರೆಜಿಲ್‌ನ 80 ನಗರಗಳಲ್ಲಿ ಸಾವಿರಾರು ಜನರು ಬೀದಿಗಳಿದು ಸರ್ಕಾರದ ವಿರುದ್ಧ ಪ್ರತಿಭನೆ ನಡೆಸುತ್ತಿದ್ದಾರೆ. ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ ಹಾಗೂ ಸಾರ್ವಜನಿಕ ಸೇವೆಗಳಲ್ಲಿ ಹೆಚ್ಚಿನ ಬಂಡವಾಳ ಹೂಡದಿರುವ ಕುರಿತು ಅಲ್ಲಿನ ಜನರು ಸರ್ಕಾರದ ವಿರುದ್ಧ ದಂಗೆ ಎದ್ದಿದ್ದಾರೆ.

ಕಾನ್ಫೆಡರೇಷನ್ ಕಪ್ ಆತಿಥ್ಯ ವಹಿಸಿರುವ ಪ್ರಮುಖ ನಗರಗಳಲ್ಲೊಂದಾದ ರಿಯೋ ಡಿ ಜನೈರೋದಲ್ಲಿ 300,000 ಅಧಿಕ ಜನರು ಬೀದಿಗಿಳಿದಿದ್ದು ಕಂಡುಬಂದಿದೆ. ಈ ಸಮಯದಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಹಾಗೂ ರಬ್ಬರ್ ಬುಲೆಟ್‌ಗಳನ್ನು ಪ್ರಯೋಗಿಸಿದರು.

2014ರ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಪೂರ್ವಭಾವಿಯಾಗಿ ನಡೆಯುತ್ತಿರುವ ಕಾನ್ಫೆಡರೇಷನ್ ಕಪ್ ಪಂದ್ಯಾವಳಿಯನ್ನು ರದ್ದುಪಡಿಸದಿರಲು ವಿಶ್ವ ಫುಟ್ಬಾಲ್ ಫೆಡರೇಷನ್ ತೀರ್ಮಾನಿಸಿದೆ. ಮುಂಬರುವ ವಿಶ್ವಕಪ್ ಪಂದ್ಯಾವಳಿಯಲ್ಲಿ 32 ಪ್ರಮುಖ ತಂಡಗಳು ಭಾಗವಹಿಸಲಿವೆ.

'ಪಂದ್ಯಾವಳಿಯನ್ನು ರದ್ದುಪಡಿಸುವ ಕುರಿತು ಫೀಫಾ ಅಥವಾ ಸ್ಥಳೀಯ ಸಂಘಟನಾ ಸಮಿತಿಯಾಗಲಿ ಇದುವರೆಗೂ ಚರ್ಚಿಸಿಲ್ಲ' ಎಂದು ಫೀಫಾ ಹೇಳಿಕೊಂಡಿದೆ.

ಬ್ರೆಜಿಲ್‌ನಲ್ಲಿ ಇತ್ತೀಚೆಗೆ ಸಾಮೂಹಿಕ ಪ್ರತಿಭಟನೆ ನಡೆದಿದ್ದು ತುಂಬಾ ವಿರಳ. ಆದರೆ, ಸರ್ಕಾರದ ಧೋರಣೆಗಳಿಂದ ಈಗ ಜನರು ಬೀದಿಗಿಳಿದಿದ್ದಾರೆ. ಬಸ್‌ಗಳ ಮತ್ತು ಉಪ ದಾರಿಗಳ ದರ ಹೆಚ್ಚಿಸಿದ್ದಕ್ಕೆ ಬ್ರೆಜಿಲ್ ಪ್ರಜಗಳು ಮತ್ತಷ್ಟು ಆಕ್ರೋಶಗೊಂಡಿದ್ದಾರೆ. ಫುಟ್ಬಾಲ್ ವಿಶ್ವಕಪ್ ಮತ್ತು ರಿಯೋ ಡಿ ಜನೈರೋದಲ್ಲಿ ನಡೆಯಲಿರುವ 2016ರ ಒಲಿಂಪಿಕ್ಸ್‌ಗಾಗಿ ಸಾಕಷ್ಟು ಪ್ರಮಾಣದ ಹಣ ಖರ್ಚು ಮಾಡಿರುವ ಹಿನ್ನೆಲೆಯಲ್ಲೂ ಕೆಲವರು ವಿಶ್ವದರ್ಜೆಯ ಸೌಲಭ್ಯಗಳನ್ನು ನೀಡುವಂತೆ ಪ್ರತಿಭಟಿಸಿ ಬ್ಯಾನರ್ ಹಿಡಿದು ಬೀದಿಗಿಳಿದಿದ್ದಾರೆ.

ವೆಬ್ದುನಿಯಾವನ್ನು ಓದಿ