ಭಾರತೀಯ ಹಾಕಿ ತಂಡದ ಕೋಚ್ ಆಗಿ ಭಾಸ್ಕರನ್‌ ಆಯ್ಕೆ

ಬುಧವಾರ, 20 ನವೆಂಬರ್ 2013 (19:07 IST)
PR
ಮಾಜಿ ಒಲಂಪಿಕ್ ಸ್ವರ್ಣ ಪದಕ ವಿಜೇತ ಭಾಸ್ಕರನ್‌ರನ್ನು ಭಾರತೀಯ ಪುರುಷ ಹಾಕಿ ತಂಡದ ಕೋಚ್‌ ಆಗಿ ನೇಮಕವಾಗಿದ್ದಾರೆ.

ಮುಂದಿನ ವರ್ಷ ದೆಹಲಿಯಲ್ಲಿ ನಡೆಯಲಿರುವ ಎಫ್‌ಐಹೆಚ್‌ ವಿಶ್ವ ಲೀಗ್‌ ಫೈನಲ್ಸ್ ಮತ್ತು ಹಾಲೆಂಡ್‌ನಲ್ಲಿ ನಡೆಯಲಿರುವ ಎಫ್‌ಐಹೆಚ್‌ ವಿಶ್ವ ಕಪ್‌ ಸಿದ್ದತೆಗಾಗಿ ಭಾಸ್ಕರನ್‌ರನ್ನು ಕೋಚ್‌ವಾಗಿ ನೇಮಕ ಮಾಡಲಾಗಿದೆ.

ಭೋಪಾಲ್‌ನ ಸಾಯಿ ಸೆಂಟರ್‌ನಲ್ಲಿ ತರಬೇತಿ ಶಿಬಿರ ಭಾಸ್ಕರನ್‌ ನೇತೃತ್ವದಲ್ಲಿ ನಡೆಯಲಿದೆ .

ಭಾಸ್ಕರನ್‌ರವರ ಅನುಭವ, ತರಬೇತಿಗೆ ಸಹಾಯವಾಗಲಿದೆ ಎಂದು ಹಾಕಿ ಇಂಡಿಯಾದ ಮುಖ್ಯಸ್ಥ ನರಿಂದರ ಬತ್ರಾ ಹೇಳಿದ್ದಾರೆ. ಭಾಸ್ಕರನ್‌ ಸಾಕಷ್ಟು ಸಲ ತರಬೇತಿ ನೀಡಿದ್ದಾರೆ.

2006ರ ಮೆಶೋನಗ್ಲಬಾಖನಲ್ಲಿ ನಡೆದ ವಿಶ್ವ ಹಾಕಿ ಕಪ್‌ನಲ್ಲಿ ಭಾರತೀಯ ತಂಡಕ್ಕೆ ಕೊಚ್‌ ಆಗಿ ಕೆಲಸ ನಿರ್ವಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ