ಭೂಪತಿ ದಾಂಪತ್ಯದಲ್ಲಿ ಬಿರುಕು; ಪತ್ನಿ ಶ್ವೇತಾಗೆ ಡೈವೋರ್ಸ್..!

ಶನಿವಾರ, 10 ಅಕ್ಟೋಬರ್ 2009 (11:10 IST)
PTI
PTI
ಭಾರತದ ಪ್ರಮುಖ ಡಬಲ್ಸ್ ಟೆನಿಸ್ ಆಟಗಾರ ಮಹೇಶ್ ಭೂಪತಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ಪತ್ನಿ ರೂಪದರ್ಶಿ ಶ್ವೇತಾ ಜಯ್‌ಶಂಕರ್ ಜತೆಗಿನ ಸಂಬಂಧವನ್ನು ಕಡಿದುಕೊಂಡಿದ್ದಾರೆ.

ಏಳು ವರ್ಷಗಳ ಕಾಲ ಜತೆಯಾಗಿ ಜೀವಿಸಿದ ಭೂಪತಿ-ಶ್ವೇತಾ ಜೋಡಿ ಇದೀಗ ವಿವಾಹ ವಿಚ್ಛೇದನ ನೀಡಲು ತೀರ್ಮಾನ ಕೈಗೊಂಡಿದ್ದಾರೆಂದು ಶುಕ್ರವಾರ ನೀಡಲಾದ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಶ್ವೇತಾ ಹಾಗೂ ನಾನು ಬೇರೆಯಾಗಲು ನಿರ್ಧರಿಸಿದ್ದೇವೆ. ಆದರೂ ನಾವಿಬ್ಬರು ಪರಸ್ಪರ ಆದರಪೂರ್ವಕವಾಗಿ ಇರಲಿದ್ದೇವೆ ಎಂದು ಭೂಪತಿ ತಿಳಿಸಿದ್ದಾರೆ.

ಮತ್ತೊಂದು ಹೇಳಿಕೆಯಲ್ಲಿ ಶ್ವೇತಾ ಕೂಡಾ ಭೂಪತಿಗೆ ಭವಿಷ್ಯದಲ್ಲಿ ಉತ್ತವಾಗಲಿ ಎಂದು ಹಾರೈಸಿದ್ದಾರೆ.

ಭೂಪತಿ ಹಾಗೂ ಶ್ವೇತಾ 2002ರಲ್ಲಿ ವಿವಾಹವಾಗಿದ್ದರು. 35ರ ಹರೆಯದ ಭೂಪತಿ, ಕ್ರೀಡಾಜೀವನದಲ್ಲಿ ಡಬಲ್ಸ್ ಹಾಗೂ ಮಿಶ್ರಡಬಲ್ಸ್ ಸೇರಿದಂತೆ ಒಟ್ಟು 11 ಗ್ರಾಂಡ್‌ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡ ಸಾಧನೆಗೈದಿದ್ದಾರೆ.

2001ರಲ್ಲಿ ಭೂಪತಿಗೆ ದೇಶದ ಅತ್ಯುನ್ನತ 'ಪದ್ಮ ಶ್ರೀ ಪ್ರಶಸ್ತಿ' ನೀಡಿ ಗೌರವಿಸಲಾಗಿತ್ತು. ಆದರೆ ಇದೀಗ ದಾಂಪತ್ಯ ಜೀವನದಲ್ಲಿ ವಿರಸವುಂಟಾಗಲು ಕಾರಣವೇನೆಂದು ತಿಳಿದು ಬಂದಿಲ್ಲ.

ವೆಬ್ದುನಿಯಾವನ್ನು ಓದಿ