ಮತ್ತೊಂದು ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟುಕೊಂಡ ಆನಂದ್

ಮಂಗಳವಾರ, 22 ನವೆಂಬರ್ 2011 (15:51 IST)
ಇಲ್ಲಿ ನಡೆಯುತ್ತಿರುವ ಟಾಲ್ ಮೆಮೋರಿಯಲ್ ಇಂಟರ್ ನ್ಯಾಷನಲ್ ಚೆಸ್ ಟೂರ್ನಮೆಂಟ್‌ನಲ್ಲಿ ರಷ್ಯಾದ ವ್ಲಾದಿಮಿರ್ ಕ್ರಾಮ್ನಿಕ್ ವಿರುದ್ಧದ ಐದನೇ ಸುತ್ತಿನ ಪಂದ್ಯದಲ್ಲೂ ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇದರೊಂದಿಗೆ ಸತತ ಐದನೇ ಬಾರಿಗೂ ಡ್ರಾ ಸಾಧಿಸಿರುವ ಆನಂದ್, ಅತ್ಯಂತ ಕಠಿಣ ಟೂರ್ನಮೆಂಟ್ ಎಂದೇ ಹೆಸರಿಸಬಹುದಾದ ಈ ಪಂದ್ಯಾವಳಿಯಲ್ಲಿ ಶೇಕಡಾ 50ರಷ್ಟು ಅಂಕ ಸಂಪಾದಿಸಿ ಜಂಟಿಯಾಗಿ ಐದನೇ ಸ್ಥಾನ ಹಂಚಿಕೊಂಡಿದ್ದಾರೆ.

ಟೂರ್ನಿಯಲ್ಲಿ ಸತತ ಎರಡನೇ ದಿನವೂ ನಡೆದ ಎಲ್ಲ ಪಂದ್ಯಗಳು ಸಮಬಲದಲ್ಲಿ ಅಂತ್ಯಗೊಂಡಿದೆ. ಉಕ್ರೇನ್‌ನ ವಾಸ್ಲಿ ಇವಾನ್‌ಚುಕ್ ಅವರು ನಾರ್ವೆಯ ವಿಶ್ವ ನಂ. 1 ಮಗ್ನಾಸ್ ಕಾರ್ಲ್ಸನ್ ವಿರುದ್ಧ ಹಾಗೂ ಅಮೆರಿಕಾದ ಹಿಕಾರು ನಕಮುರ ಅವರು ಅರ್ಮೆನಿಯಾದ ಲಿವೊನ್ ಅರೋನಿಯನ್ ವಿರುದ್ಧ ಸಮಬಲ ಸಾಧಿಸಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ಐದನೇ ಸುತ್ತಿನ ಫಲಿತಾಂಶ:
ವಿಶ್ವನಾಥನ್ ಆನಂದ್ (ಭಾರತ, 2.5) - ವ್ಲಾದಿಮಿರ್ ಕ್ರಾಮ್ನಿಕ್ (ರಷ್ಯಾ, 2) ಪಂದ್ಯ ಡ್ರಾ.
ವಾಸ್ಲಿ ಇವಾನ್‌ಚುಕ್ (ಉಕ್ರೇನ್, 2.5) - ಮಗ್ನಾಸ್ ಕಾರ್ಲ್ಸನ್ (ನಾರ್ವೆ, 3) ಪಂದ್ಯ ಡ್ರಾ.
ಹಿಕಾರು ನಾಕಮುರ (ಅಮೆರಿಕಾ, 2) - ಲಿವೊನ್ ಅರೋನಿಯನ್ (ಅರ್ಮೆನಿಯಾ, 3) ಪಂದ್ಯ ಡ್ರಾ.
ಇಯಾನ್ ನೆಪೊಮ್ನಿಯಾಚ್ನಿ (ರಷ್ಯಾ, 3) - ಪೀಟರ್ ಸ್ವಿಡ್ಲೆರ್ (ರಷ್ಯಾ, 3) ಪಂದ್ಯ ಡ್ರಾ.

ವೆಬ್ದುನಿಯಾವನ್ನು ಓದಿ