ಮಿಯಾಮಿ ಟೆನಿಸ್‌ : ಫೈನಲ್‌‌‌‌‌‌‌ನಲ್ಲಿ ಸೆರೆನಾ, ಲೀ ನಾ ಸೆಣಸಾಟ

ಶನಿವಾರ, 29 ಮಾರ್ಚ್ 2014 (16:33 IST)
PR
ಮಿಯಾಮಿ ಮಾಸ್ಟರ್ಸ್‌ ಟೆನಿಸ್‌ ಟೂರ್ನಮೆಂಟ್‌‌ನಲ್ಲಿ ವಿಶ್ವದ ನಂಬರ್ ಓನ್ ಶ್ರೇಯಾಂಕಿತ ಆಟಗಾರ ಸ್ಪೇನ್ ದೇಶದ ರಫೆಲ್ ನಡಾಲ್‌ ತಮ್ಮ ಮೊದಲ ಪ್ರಶಸ್ತಿ ಪಡೆಯುವುದಕ್ಕಾಗಿ ಸೆಮಿಪೈನಲ್‌‌ನಲ್ಲಿ ಪ್ರವೇಶ ಪಡೆದಿದ್ದಾರೆ.

ಮಹಿಳಾ ವಿಭಾಗದ ನಂಬರ್ ಓನ್ ಶ್ರೇಯಾಂಕಿತ ಸೆರೆನಾ ವಿಲಿಯಮ್ಸ್‌‌‌‌‌ ಮತ್ತು ಎರಡನೇ ಶ್ರೇಯಾಂಕಿತ ಲೀ ನಾ ಫೈನಲ್‌‌‌ನಲ್ಲಿ ಸೆಣಸಾಡಲಿದ್ದಾರೆ.

ಟಾಪ್‌ ಸೀಡ್‌ ಸ್ಪೇನ್ ದೇಶದ ನಡಾಲ್ ಪುರುಷರ ಸಿಂಗಲ್ಸ್‌‌ನಲ್ಲಿ ಕ್ವಾರ್ಟರ್‌ ಫೈನಲ್‌‌ನಲ್ಲಿ 12ನೇ ಶ್ರೇಯಾಂಕಿತ ಕೆನಡಾದ ಮಿಲೋಸ್ ರಾವೊನಿಕ್‌‌ ರನ್ನು ಮೂರು ಸೆಟ್‌‌‌ಗಳಲ್ಲಿ 4-6, 6-2, 6-4 ಅಂತರದಿಂದ ಸೋಲಿಸಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಏಳನೆ ಶ್ರೇಯಾಂಕಿತ ಚೆಕ್‌‌ ಗಣರಾಜ್ಯದ ಥಾಮಸ್‌ ಬೆಡ್ರಿಂಚ್‌ 22ನೇ ಶ್ರೇಯಾಂಕಿತ ಯೂಕೆನ ದೇಶದ ಎಲೆಕಸಾಂದ್ರ ಡೊಲ್ಗೋಪೋಲಪವ ರನ್ನು 6-4, 7-6 ಸೆಟ್‌‌ಗಳಿಂದ ಸೋಲಿಸಿ ಕ್ವಾರ್ಟರ್‌ ಫೈನಲ್‌‌ನಲ್ಲಿ ಗೆಲುವನ್ನು ಸಾಧಿಸಿದ್ದಾರೆ.

ಮಹಿಳಾ ವಿಭಾಗದಲ್ಲಿ ಅಮೆರಿಕಾದ ಸೆರೆನಾ ವಿಲಿಯಮ್ಸ್‌‌ ತನ್ನ ಎದುರಾಳಿಯಾದ ನಾಲ್ಕನೇ ಶ್ರೇಯಾಂಕಿತ ರೂಸ್‌ ನ ಮಾರಿಯಾ ಶರಾಪೋವಾರನ್ನು 6-4, 6-3 ಸೆಟ್‌ಗಳಿಂದ ಸೋಲಿಸಿದ್ದಾರೆ . ಮುಂದಿನ ಪಂಧ್ಯದಲ್ಲಿ ಸೆರೆನಾ ಏಷ್ಯಾದ ಏಕಮಾತ್ರ ಗ್ಯಾಂಡ್ ಸ್ಲಾಮ್‌ ವಿಜೇತೇ ಲೀನಾರ ವಿರುದ್ದ ಸೆಣಸಾಡಲಿದ್ದಾರೆ.

ವರ್ಷದ ಮೊದಲ ಗ್ರ್ಯಾಂಡ್ ಸ್ಲಾಮ್‌ ಆಸ್ಟ್ರೇಲಿಯನ್‌ ಓಪನ್‌‌ ಪ್ರಶಸ್ತಿ ಮುಡಿಗೇರಿಸಿಕೊಂಡ ಲೀ ನಾ ಮಹಿಳಾ ಸಿಂಗಲ್ಸ್‌ನ ಸೆಮಿಫೈನಲ್‌‌ನಲ್ಲಿ 10 ನೇ ಶ್ರೇಯಾಂಕಿತ ಸ್ಲೋವಾಕಿಯಾದ ಡೊಮಿನಿಕಾ ಸಿಬುಲಕೋವಾ ರನ್ನು ಮೂರು ಸೆಟ್‌‌ಗಳಲ್ಲಿ 7-5, 2-6, 6-3 ಅಂತರದಿಂದ ಸೋಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ