ಮುಂಬೈನ ಐಬಿಎಲ್ ತಂಡ ಖರೀದಿಸಿದ ಗವಾಸ್ಕರ್

ಶುಕ್ರವಾರ, 19 ಜುಲೈ 2013 (15:27 IST)
PR
PR
ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ಸಮೀಪಿಸುತ್ತಿರುವ ವೇಳೆಯಲ್ಲಿ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಮುಂಬೈ ತಂಡದ ಷೇರು ಖರೀದಿಸಿದ್ದಾರೆ, ಇವರ ಜೊತೆ ನಟ ನಾಗಾರ್ಜುನ್ ಕೈ ಜೋಡಿಸಿದ್ದಾರೆ .

ಗವಾಸ್ಕರ್ ಅವರಿಗೆ ಬ್ಯಾಡ್ಮಿಂಟನ್ ಕ್ರೀಡೆ ಅಚ್ಚುಮೆಚ್ಚಿನದು., ಬ್ಯಾಡ್ಮಿಂಟನ್ ಅಭ್ಯಾಸವನ್ನು ಕೂಡ ಅವರು ಆಗಿದ್ದಾಂಗೆ ನಡೆಸುತ್ತಿರುತ್ತಾರೆ. ಅದಕ್ಕಾಗಿ ಮುಂಬೈ ಶೇರು ಖರೀದಿ ಮಾಡಿದ್ದೇನೆ ಎಂದು ಹೇಳಿದರು .

ಈ ಪಂಧ್ಯಗಳು ಆಗಷ್ಟ್ 14 ರಿಂದ ಶುರು ಆಗಲಿವೆ , ಈ ಪಂಧ್ಯದಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿದ್ದು, 90 ಪಂದ್ಯಗಳು ನಡೆಯಲಿವೆ. ಅಲ್ಲದೆ ಈ ಪಂದ್ಯಾವಳಿ ಆಗಸ್ಟ್ 14ರಿಂದ 31ರವರೆಗೆ 6 ನಗರಗಳಲ್ಲಿ ನಡೆಯಲಿದೆ. ಗವಾಸ್ಕರ್ ಮುಂಬೈ ತಂಡ ಖರೀದಿಸಿರುವುದು ಮುಂಬೈ ತಂಡದ ಬಗ್ಗೆ ಜನರ ಕುತೂಹಲ ಹೆಚ್ಚಿಸಿದೆ .

ವೆಬ್ದುನಿಯಾವನ್ನು ಓದಿ