ಮುರ್ರೆ ಕನಸು ಮಣ್ಣು ಮಾಡಿದ ಗಾಸ್ಕೆಟ್

ಶನಿವಾರ, 3 ನವೆಂಬರ್ 2007 (14:56 IST)
ಇಂಗ್ಲೆಂಡಿನ ನಂ 1 ಟೆನಿಸ್ ಆಟಗಾರ ಆಂಡಿ ಮುರ್ರೆ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರನ್ನು ಸೋಲಿಸಿದ ಪ್ರಾನ್ಸ್‌ನ ರಿಚರ್ಡ್ ಗಾಸ್ಕೆಟ್ ಅವರು, ಪ್ಯಾರಿಸ್ ಮಾಸ್ಟರ್ಸ್ ಸಿರಿಸ್‌ನ ಸೆಮಿಫೈನಲ್ ಹಂತವನ್ನು ತಲುಪಿ, ಕಪ್ ಕೈಗೆತ್ತಿಕೊಳ್ಳುವ ಮುರ್ರೆ ಕನಸು ಮಣ್ಣು ಮಾಡಿದ್ದಾರೆ.

ಮೂರು ಸೆಟ್‌ಗಳ ಕ್ವಾರ್ಟರ್ ಪೈನಲ್ ಪಂದ್ಯದಲ್ಲಿ ಗಾಸ್ಕೆಟ್ ಅವರು ದ್ವಿತೀಯ ಸೆಟ್‌ನ ಸೋಲಿನಿಂದ ಚೇತರಿಸಿಕೊಂಡು ಗೆಲುವು ಸಾಧಿಸಿದ್ದು, ಶಾಂಘೈ ಓಪನ್ ಟೆನಿಸ್‌ ಟೂರ್ನಿಗೆ ಆಯ್ಕೆಯಾಗುವತ್ತ ಸಾಗಿದ್ದಾರೆ.

ನಡೆದ ಇತರ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಮಾರ್ಕ್ಸ್ ಬಾಗ್ದಾತಿಸ್, ರಾಫೆಲ್ ನಾಡಾಲ್ ಗೆಲುವು ಸಾಧಿಸಿ, ಸೆಮಿಫೈನಲ್ ಹಂತವನ್ನು ತಲುಪಿದ್ದಾರೆ.

ಶಾಂಘೈ ಮಾಸ್ಟರ್ಸ್ ಕಪ್ ಟೂರ್ನಿಗೆ ಆಯ್ಕೆಯಾಗಬೇಕಾದರೆ, ಗಾಸ್ಕೆಟ್ ಅವರು ಪ್ಯಾರಿಸ್ ಕಪ್ ಟೆನಿಸ್ ಟೂರ್ನಿಯ ಅಂತಿಮ ಹಂತ ತಲುಪಬೇಕು ಇಲ್ಲವೆ ಬಾಗ್ದಾತಿಸ್ ಅವರು ನಾಡಾಲ್ ವಿರುದ್ಧ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಬೇಕು.

ವೆಬ್ದುನಿಯಾವನ್ನು ಓದಿ