ಮೇರಿ ಕೋಮ್ ಅದ್ವಿತಿಯ ಬಾಕ್ಸರ್ ಪಟು: ಹೋಲಿಫಿಲ್ಡ್‌

ಬುಧವಾರ, 18 ಡಿಸೆಂಬರ್ 2013 (15:20 IST)
PR
ನವದೆಹಲಿ: ಐದು ಬಾರಿ ವಿಶ್ವ ಚಾಂಪಿಯನ್‌‌ ಮತ್ತು ಒಲಂಪಿಕ್‌ನಲ್ಲಿ ಕಂಚಿನ ಪದಕ ಪಡೆದ ಮೇರಿ ಕೋಮ್‌ ಅಸಾಧರಣ ಪ್ರತಿಭೆಯ ಬಾಕ್ಸಿಂಗ್ ಪಟುವಾಗಿದ್ದಾರೆ, ಭಾರತದ ಈ ಮಹಾನ್‌‌ ಕ್ರೀಡಾಪಟುವಿನ ಎಲ್ಲಾ ಸ್ಪರ್ಧೆಗಳಿಗೆ ಮತ್ತು ಇವರ ಸಾಧನೆಗಳನ್ನು ಪ್ರೋತ್ಸಾಹಿಸಬೇಕು ಎಂದು ಅಮೆರಿಕಾದ ಮಹಾನ್ ಬಾಕ್ಸರ್‌ ಎವೆಂಡರ್‌‌ ಹೋಲಿಫಿಲ್ಡ್‌ ಹೇಳಿದ್ದಾರೆ.

ಖೇಲ್‌ರತ್ನ ಪ್ರಶಸ್ತಿ ಪಡೆದ ಮೇರಿ ಕೋಮ್ ಈ ವರ್ಷದ ಪ್ರಾರಂಭದಲ್ಲಿ ತನ್ನ ಮೂರನೇ ಮಗುವಿಗೆ ಜನ್ಮ ನೀಡಿದ್ದರಿಂದ ಕೆಲ ಸಮಯ ಪಂದ್ಯಾವಳಿಯಿಂದ ದೂರ ಸರಿದಿದ್ದಾರೆ.

ಒಂದು ಸಂಘಟನೆಯ ವತಿಯಿಂದ ಕ್ರಿಸ್ಮಸ್ ಸಿದ್ದತೆಯಲ್ಲಿ ಭಾಗವಹಿಸಲು ಬಂದಿದ್ದ ಹೋಲಿಫಿಲ್ಡ್‌‌ 1984ರಲ್ಲಿ ಒಲಂಪಿಕ್‌‌ನಲ್ಲಿ ಕಂಚಿನ ಪದಕ ಪಡೆದಿದ್ದರು. ಇವರು ಭಾರತದ ಬಾಕ್ಸಿಂಗ್ ಪಂದ್ಯವನ್ನು ಇಷ್ಟಪಡುತ್ತಾರೆ.

ವೆಬ್ದುನಿಯಾವನ್ನು ಓದಿ