ಮೊಂಟೆಕಾರ್ಲೊ ಓಪನ್‌: 8 ಬಾರಿ ಚಾಂಪಿಯನ್ ರಫೆಲ್ ನಡಾಲ್‌‌‌ಗೆ ಭಾರಿ ಸೋಲು

ಶನಿವಾರ, 19 ಏಪ್ರಿಲ್ 2014 (16:50 IST)
PR
ಮೊಂಟೆಕಾರ್ಲೊ ಮಾಸ್ಟರ್ಸ್‌‌‌ ಟೆನಿಸ್‌‌‌ ಟೂರ್ನಮೆಂಟ್‌‌‌ನಲ್ಲಿ ಡೆವಿಡ್‌ ಫೆರರ್‌‌ ತಮ್ಮದೇ ದೇಶದ ಮತ್ತು 8 ಬಾರಿ ಚಾಂಪಿಯನ್‌‌ ಆದ ರಫೆಲ್‌ ನಡಾಲ್‌‌ರವನ್ನು ಕ್ವಾರ್ಟರ್‌‌ ಫೈನಲ್‌ನಲ್ಲಿ ಸೋಲಿಸಿದ್ದಾರೆ.

ಆರನೇ ಶ್ರೇಯಾಂಕಿತ ಫೆರರ್‌ ಅಗ್ರಶ್ರೇಣಿಯ ನಡಾಲ್‌ರನ್ನು ನೇರ ಸೆಟ್‌‌ಗಳಲ್ಲಿ 7-6, 6-4 ಸೆಟ್‌‌‌‌‌ಗಳ ಅಂತರದಿಂದ ಸೋಲಿಸಿದ್ದಾರೆ.

ಗುರುವಾರ ಕ್ಲೆ ಕೊರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ನಡಾಲ್ ತಮ್ಮ ಕರೀಯರ್‌ನ 300ನೇ ಮತ್ತು ಮೊಂಟೆಕಾರ್ಲೊ ಕಟ್ರಿ ಕ್ಲಬ್‌ನಲ್ಲಿ 50ನೇ ಪಂದ್ಯದಲ್ಲಿ ಗೆಲುವನ್ನು ಸಾಧಿಸಿದ್ದರು , ಆದರೆ ಶುಕ್ರವಾರ ನಡೆದ ಪಂದ್ಯದಲ್ಲಿ ತಮ್ಮ ಮೂರನೇ ಸೋಲನ್ನು ಅನುಭವಿಸಿದ್ದಾರೆ.

ವೆಬ್ದುನಿಯಾವನ್ನು ಓದಿ