ರಾಷ್ಟ್ರೀಯ ಶೂಟಿಂಗ್‌‌ ಪಂದ್ಯದಲ್ಲಿ ಬಿಂದ್ರಾಗೆ ಸ್ವರ್ಣ ಪದಕ

ಶುಕ್ರವಾರ, 27 ಡಿಸೆಂಬರ್ 2013 (16:11 IST)
PR
ಸೀನಿಯರ್‌ ನ್ಯಾಶನಲ್‌ ಶೂಟಿಂಗ್‌‌ ಚಾಂಪಿಯನ್‌‌ಶಿಪ್‌ನಲ್ಲಿ ಬೀಜಿಂಗ್ ಒಲಂಪಿಕ್‌ನಲ್ಲಿ ಸ್ವರ್ಣ ಪದಕ ಪಡೆದ ಅಭಿನವ್ ಬಿಂದ್ರಾ 10 ಮೀಟರ್ ಏರ್‌‌ ರೈಫಲ್‌ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಪಡೆದಿದ್ದಾರೆ. ಇವರು 208.9 ಅಂಕಗಳಿಂದ ಗೆಲುವನ್ನು ಸಾಧಿದ್ದಾರೆ.

ಸೇನೆಯ ಅಶೋಕ್ ಚಾಬನಕೆ(204.03) ಎರಡನೇ ಸ್ಥಾನ, ಒಲಂಪಿಯನ್‌ ಸಂಜೀವ್ ರಾಜಪುತ್( 182.8) ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಸೆಂಟರ್‌ ಪೈರ್‌ ಪಿಸ್ತೂಲ್‌‌ನಲ್ಲಿ ಲಂಡನ್‌‌ ಒಲಂಪಿಕ್‌ನಲ್ಲಿ ರಜತ ಪದಕ ಪಡೆದ ವಿಜಯ ಕುಮಾರ್ ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ಸೇನೆಯ ಪೆಬ್ಮಾ ತಮಾಂಗ್ 583. ಅಂಕ ಗಳಿಸಿ ಈ ಪಂದ್ಯಗಳಲ್ಲಿ ಸ್ವರ್ಣ ಪದಕ ಪಡೆದಿದ್ದಾರೆ. 578 ಅಂಕಗಳು ಗಳಿಸಿದ ಹರಪ್ರಿತ ಸಿಂಗ್‌‌ , ಓಂಕಾರ ಸಿಂಗ್‌ ಕಂಚಿನ ಪದಕ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ