ರಿಯಲ್‌ ಮೆಡ್ರಿಡ್‌ ಈಗ ವಿಶ್ವದ ಎಲ್ಲಕ್ಕಿಂತ ಶ್ರೀಮಂತ ಕ್ಲಬ್‌‌

ಸೋಮವಾರ, 27 ಜನವರಿ 2014 (16:12 IST)
PR
ಮೆಡ್ರಿಡ್‌ : ಸ್ಪೇನ್‌ ದೇಶದ ಮೆಡ್ರಿಡ್‌‌ ಸತತ 9 ನೇ ವರ್ಷದಲ್ಲಿ ಕೂಡ ವಿಶ್ವದ ಎಲ್ಲಕ್ಕಿಂತ ಶ್ರೀಮಂತ ಫುಟ್ಬಾಲ್ ಕ್ಲಬ್ ಆಗಿದೆ . ಇದರ ನಂತರ ಸ್ಪೇನ್‌ ದೇಶದ ಎಫ್‌ಸಿ ಭಾರ್ಸಿಲೋನಾ ಕ್ಲಬ್ ಎರಡನೇ ಸ್ಥಾನ ಪಡೆದಿದೆ.

ಒಂದು ಸಮಿಕ್ಷೆಯ ಪ್ರಕಾರ 2012-13 ಅವಧಿಯಲ್ಲಿ ರಿಯಲ್‌‌ 51.8 ಕೋಟಿ ಯುರೋ ಹಣ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.1.2 ರಷ್ಟು ಆದಾಯ ಹೆಚ್ಚಿದೆ.

2003-04 ರ ಅವಧಿಯಲ್ಲಿ ಇಂಗ್ಲೆಂಡ್‌ನ ಮೆಂ‌ಚೆಸ್ಟರ್‌‌ ಯುನೈಟೆಡ್‌‌ ಕ್ಲಬ್‌‌ ವಿಶ್ವದಲ್ಲಿಯೇ ಶ್ರೀಮಂತ ಫುಟ್ಬಾಲ್ ಕ್ಲಬ್‌ ಆಗಿತ್ತು. ಈ ಅವಧಿ ನಂತರ ಇಲ್ಲಿಯವರೆಗೂ ಕೂಡ ಸ್ಪೇನ್‌‌ನ ರಿಯಲ್‌ ಕ್ಲಬ್‌‌ ಮೊದಲ ಸ್ಥಾನದಲ್ಲಿ ಇದೆ. 1996-37 ರಿಂದ 2003 ಮೂರರವರೆಗೆ ಇಂಗ್ಲೆಂಡ್‌ನ ಮೆಂ‌ಚೆಸ್ಟರ್‌‌ ಯುನೈಟೆಡ್‌‌ ಕ್ಲಬ್‌ ಅತಿ ಹೆಚ್ಚಿನ ಶ್ರೀಮಂತ ಕ್ಲಬ್‌ ಆಗಿತ್ತು.

ವೆಬ್ದುನಿಯಾವನ್ನು ಓದಿ