ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಗುರಿ: ವಿಜೇಂದರ್

ಮಂಗಳವಾರ, 27 ಸೆಪ್ಟಂಬರ್ 2011 (10:16 IST)
PTI
ಅಜರ್‌ಬೈಜಾನ್‌ನಲ್ಲಿ ನಡೆಯಲಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಲಂಡನ್ ಒಲಿಂಪಿಕ್ಸ್‌‌ಗೆ ಅರ್ಹತೆ ಪಡೆಯುವ ವಿಶ್ವಾಸವಿದ್ದು, ಪದಕಗಳನ್ನು ಗೆಲ್ಲುವ ಗುರಿಯನ್ನು ಹೊಂದಿರುವುದಾಗಿ ವಿಜೇಂದರ್ ಸಿಂಗ್ ಹೇಳಿದ್ದಾರೆ.

ವಿಶ್ವಚಾಂಪಿಯನ್‌ಶಿಪ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ 120 ರಾಷ್ಟ್ರಗಳಿಂದ 650ಕ್ಕೂ ಹೆಚ್ಚಿನ ಬಾಕ್ಸರ್‌ಗಳು ಪಾಲ್ಗೊಳ್ಳುತ್ತಿದ್ದು, ವಿಶ್ವದಲ್ಲಿಯೇ ಬೃಹತ್ ವಿಶ್ವಚಾಂಪಿಯನ್‌ಶಿಪ್ ಆಗಿದೆ ಎಂದು ಮೂಲಗಳು ತಿಳಿಸಿವೆ.

8 ವಿಭಾಗಗಳಲ್ಲಿ ಟಾಪ್ 10ರಲ್ಲಿ ಸ್ಥಾನ ಪಡೆಯುವ ಬಾಕ್ಸರ್‌ಗಳು ಮುಂದಿನ ವರ್ಷ ನಡೆಯಲಿರುವ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿದ್ದಾರೆ. ಹೇವಿವೇಟ್ ಮತ್ತು ಸೂಪರ್ ಹೇವಿವೇಟ್ ವಿಭಾಗಗಳಲ್ಲಿ ಟಾಪ್-6ರಲ್ಲಿ ಸ್ಥಾನಪಡೆದವರು ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿದ್ದಾರೆ.

ಭಾರತದ ರೂರ್‌ಕೇಲಾದ 19 ವರ್ಷ ವಯಸ್ಸಿನ ಎಲ್.ದೇವೆಂದ್ರೋ ಸಿಂಗ್, ಮೊದಲ ಬಾರಿಗೆ ಹಿರಿಯರ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ

ವೆಬ್ದುನಿಯಾವನ್ನು ಓದಿ