ಲಂಡನ್ ಒಲಿಂಪಿಕ್ಸ್; ಉದ್ಘಾಟನಾ ಸಮಾರಂಭಕ್ಕೆ ಕತ್ತರಿ

ಗುರುವಾರ, 19 ಜುಲೈ 2012 (11:09 IST)
WD
ಸಂಚಾರ ವ್ಯವಸ್ಥೆ ಹಾಗೂ ವಾಹನ ದಟ್ಟಣೆ ಬಗ್ಗೆ ಕ್ರೀಡಾಪಟುಗಳು ದೂರು ಸಲ್ಲಿಸಿರುವ ಹಿನ್ನಲೆಯಲ್ಲಿ ಪ್ರತಿಷ್ಠಿತ ಲಂಡನ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಕತ್ತರಿ ಪ್ರಯೋಗ ಮಾಡಲು ಸಂಘಟಕರು ನಿರ್ಧರಿಸಿದ್ದಾರೆ.

ದೀರ್ಘಾವಧಿಯ ವರೆಗೆ ಉದ್ಘಾಟನಾ ಸಮಾಂರಭ ನಡೆಯಲಿರುವುದರಿಂದ ಸಾರಿಗೆ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಇದರಿಂದ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಹಿಂದಿರುಗಲು ಕಷ್ಟ
ವಾಗಬಹುದು ಎಂಬುದನ್ನು ಮನಗಂಡಿರುವ ಸಂಘಟನಾ ಸಮಿತಿಯು ಕೆಲವೊಂದು ಕಾರ್ಯಕ್ರಮಗಳನ್ನು ಕೈಬಿಡಲು ನಿರ್ಧರಿಸಿದೆ.

ಜುಲೈ 27ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಿಂದ ಕೆಲವು ಕಾರ್ಯಕ್ರಮಗಳನ್ನು ತೆಗೆದು ಹಾಕಲು ನಿರ್ಧರಿಸಲಾಗಿದೆ. ಸ್ಥಳೀಯ ಸಮಯ 12.30ಕ್ಕೆ ಸರಿಯಾಗಿ ಕಾರ್ಯಕ್ರಮ ಮುಕ್ತಾಯಗೊಳ್ಳಬೇಕು. ಇದಕ್ಕೆ ತಕ್ಕಂತೆ ಕ್ರಮ ಕೈಗೊಳಲಾಗಿದೆ. ಹಾಗಾಗಿ ಬೈಕ್ ಸಾಹಸ ಪ್ರದರ್ಶನವನ್ನು ಕೈಬಿಡಲಾಗುತ್ತಿದೆ ಎಂದು ಲಂಡನ್ ಒಲಿಂಪಿಕ್ ಸಂಘಟನಾ ಸಮಿತಿ (ಎನ್‌ಒಸಿಒಜಿ) ಪ್ರಕಟಣೆಯಲ್ಲಿ ತಿಳಿಸಿದೆ.

ವೆಬ್ದುನಿಯಾವನ್ನು ಓದಿ