ವಿಂಬಲ್ಡನ್ ಹೆನಿನ್ ,ಅನಾ ಕನಸು ಭಗ್ನ

ಇಳಯರಾಜ

ಶನಿವಾರ, 7 ಜುಲೈ 2007 (12:44 IST)
ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯ ಉಪಾಂತ್ಯವನ್ನು ತಲುಪುವಲ್ಲಿ ಯಶಸ್ವಿಯಾದ ಸೆರ್ಬಿಯಾದ ಅನಾ ಇವಾನೊವಿಕ್ ಸೆಮಿ ಪೈನಲ್ ಹಂತದಲ್ಲಿ ಪರಾಭವಗೊಂಡಿದ್ದಾರೆ.

ಟೆನಿಸ್ ಜಗತ್ತಿನ ನಾಲ್ಕು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದು ದಾಖಲೆ ಮಾಡಬೇಕೆಂಬ ಉತ್ಸಾಹದಲ್ಲಿದ್ದ, ಬೆಲ್ಜಿಯಂನ ಅಗ್ರ ಶ್ರೇಯಾಂಕಿತೆ, ಜಸ್ಟಿನ್ ಹೆನಿನ್ ಮತ್ತು ಒಂದು ತಿಂಗಳ ಅವಧಿಯಲ್ಲಿ ಎರಡನೆ ಬಾರಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯ ಉಪಾಂತ್ಯವನ್ನು ತಲುಪುವಲ್ಲಿ ಯಶಸ್ವಿಯಾದ ಸೆರ್ಬಿಯಾದ ಅನಾ ಇವಾನೊವಿಕ್ ಸೆಮಿ ಪೈನಲ್ ಹಂತದಲ್ಲಿ ಪರಾಭವಗೊಂಡಿದ್ದಾರೆ.

ಪ್ರಾನ್ಸನ ಮಾರಿಯಾನ್ ಬಾರ್ಟೊಲಿ ವಿರುದ್ದ ನಡೆದ ಸೆಮಿ ಫೈನಲ್ ಪಂದ್ಯದ ಮೊದಲ ಸೆಟ್‌ನ್ನು ನಿರಿಕ್ಷೆಯಂತೆ ಅಗ್ರಶ್ರೇಯಾಂಕಿತೆ ಹೆನಿನ್ ಕೇವಲ 22 ನಿಮಿಷಗಳ ಸೆಣಸಾಟದಲ್ಲಿ ಎರಡು ಬ್ರೆಕ್ ಪಾಯಿಂಟ್ ಮತ್ತು ಮತ್ತು ಏಕೈಕ ಏಸ್ ನೇರವಿನಿಂದ ಸೆಟ್‌ನ್ನು 6-1 ರಂತೆ ಗೆದ್ದು ಮುನ್ನಡೆ ಸಾಧಿಸಿದರು.

ದ್ವಿತೀಯ ಸೆಟ್‌ನ ಆಟಕ್ಕೆ ಅದ್ಬುತ ರೀತಿಯ ಹೋರಾಟದೊಂದಿಗೆ ಮರಳಿದ ಬಾರ್ಟೊಲಿ ಏಸ್‌ಗಳ ನೇರವಿಲ್ಲದೆ 57 ನಿಮಿಷಗಳ ರೋಮಾಂಚಕಾರಿ ದ್ವಿತೀಯ ಸೆಟ್‌ ಬಾರ್ಟೊಲಿಗೆ ಒಲಿಯಲು ಜಸ್ಟಿನ್ ಹೆನಿನ್ ಕಾರಣ ಏಸ್ ಮತ್ತು ಬ್ರೆಕ್ ಪಾಯಿಂಟಗಳ ಮೂಲಕ ಮುನ್ನಡೆ ಸಾಧಿಸಿದರೂ,ವಿನಾಕಾರಣ ತಪ್ಪು ಎಸಗಿದ್ದರ ಪರಿಣಾಮವಾಗಿ ಸೆಟ್‌ನ್ನು 7-5 ರಂತೆ ಸೋತರು.

ನಿರ್ಣಾಯಕ ತೃತೀಯ ಸೆಟ್ಟಿನಲ್ಲಿ ಬಾರ್ಟೊಲಿ ವಿರಳ ಟೆನಿಸ್ ಕಲೆಯನ್ನು ಪ್ರದರ್ಶಿಸಿದರು. ತಪ್ಪುಗಳನ್ನು ಏಸಗದೆ,ಸರ್ವ್‌ ಪಾಯಿಂಟ್ ಮತ್ತು ಬ್ರೆಕ್ ಪಾಯಿಂಟ್‌ಗಳಲ್ಲಿ ಅಂಕ ಕಲೆಹಾಕಿ ನಿರ್ಣಾಯಕ ಸೆಟ್‌ನ್ನು 36 ನಿಮಿಷಗಳ ಅವದಿಯ ಹಣಾಹಣಿಯಲ್ಲಿ 6-1 ಮ್ಯಾಚ್ ಪಾಯಿಂಟ್ ಅಂತರದಲ್ಲಿ ಗೆದ್ದು, ಪೈನಲ್ ಪಂದ್ಯವನ್ನು ವೀನಸ್ ವಿಲಿಯಮ್ಸ್ ವಿರುದ್ದ ಆಡಲಿದ್ದಾರೆ.

ವೆಬ್ದುನಿಯಾವನ್ನು ಓದಿ