ವಿಶ್ರಾಂತಿಗೆ ಶರಣಾದ ಮೌರಿಸ್ಮೊ

ಮಂಗಳವಾರ, 7 ಆಗಸ್ಟ್ 2007 (11:39 IST)
WDWD
ಕಳೆದ ಮಾರ್ಚ್ ತಿಂಗಳಿನಲ್ಲಿ ಅಪೆಂಡಿಕ್ಸ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಪ್ರೆಂಚ್ ಟೆನಿಸ್ ಪಟು ಅಮೆಲಿ ಮೌರಿಸ್ಮೊ ಅವರು ಶಸ್ತ್ರ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖವಾಗುವ ಉದ್ದೇಶದಿಂದ ಪೈಲಟ್ ಪೆನ್, ಮತ್ತು ರೋಜರ್ ಕಪ್ ಟೆನಿಸ್ ಟೂರ್ನಾಮೆಂಟಿನಲ್ಲಿ ಭಾಗವಹಿಸಲಿಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾರೆ.

ಹುಲ್ಲಿನ ಅಂಕಣಗಳಲ್ಲಿ ನಡೆಯುವ ಪಂದ್ಯಾವಳಿಗಳಲ್ಲಿ ಭಾಗವಹಿಸಬೇಕು ಎನ್ನುವುದು ನನ್ನ ಇಚ್ಚೆಯಾಗಿತ್ತು ಆದರೆ ದೈಹಿಕ ಸಮಸ್ಯೆ ಮತ್ತೇ ಉಲ್ಬಣಿಸುವ ಸಾಧ್ಯತೆ ಇರುವುದರಿಂದ ಪಂದ್ಯಾವಳಿಯಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡಿದ್ದೆನೆ ಎಂದು ಹೇಳಿದ್ದಾರೆ.

6 ರಾಂಕಿನ ಮೌರಿಸ್ಮೊ ಬದಲು ಪೈಲಟ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ 26 ನೇ ರಾಂಕ್‌ನ ಪ್ರಾನ್ಸಿಸ್ಕಾ ಶ್ಕಿವೊನ್ ಪಾಲ್ಗೊಳ್ಳಲಿದ್ದಾರೆ. ಅಗಸ್ಚ್ 17 ರಿಂದ 25 ರವರೆಗೆ ಯಾಲೆ ವಿಶ್ವವಿದ್ಯಾಲಯದ ಟೆನಿಸ್ ಕ್ರೀಡಾಂಗಣದಲ್ಲಿ ಪೈಲಟ್ ಓಪನ್ ಟೆನಿಸ್ ಪಂದ್ಯಾವಳಿ ನಡೆಯಲಿದೆ.

ವಿಂಬಲ್ಡನ್ ರನ್ನರ್ ಅಪ್ ಮಾರಿಯಾನ್ ಬಾರ್ಟೊಲಿ, ಸ್ವೆಟ್ಲಾನಾ ಕುಜನೊತ್ಸವಾ, ಡೆನಿಯಲಾ ಹಂಚುತೊವ ಮತ್ತು ಎಲಿನಾ ಡೆಮಿಂಟಿವಾ ಮತ್ತು ಲಿಂಡ್ಸೆ ಡೆವನ್‌ಪೊರ್ಟ್ ಪಂದ್ಯಾವಳಿಯಲ್ಲಿ ಇತರ ಮಹಿಳಾ ಟೆನಿಸ್ ಪಟುಗಳು.

ವೆಬ್ದುನಿಯಾವನ್ನು ಓದಿ