ವಿಶ್ವ ಚೆಸ್‌ ಚಾಂಪಿಯನ್‌ಗೆ ಸೋಲುಗಳ ಸುರಿಮಳೆ.

ಭಾನುವಾರ, 17 ನವೆಂಬರ್ 2013 (16:48 IST)
PTI
PTI
ಸತತವಾಗಿ ಐದು ಬಾರಿ ವಿಶ್ವ ಚಾಂಪಿಯನ್‌ ಪಟ್ಟ ಧರಿಸಿದ ಖ್ಯಾತ ಚೆಸ್‌ ಆಟಗಾರ ವಿಶ್ವನಾಥನ್‌ ಆನಂದ್‌ ಅವರಿಗೆ ಮತ್ತೊಂಮ್ಮೆ ಸೋಲುಂಡಿದ್ದಾರೆ. ಚೆನ್ನೈನಲ್ಲಿ ನಡೆಯುತ್ತಿರುವ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಸತತವಾಗಿ ಎರಡನೇ ಬಾರಿ ಸೋಲು ಅನುಭವಿಸುವುದರ ಮೂಲಕ ಭಾರತೀಯರ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ.

ಮೊನ್ನೆ ಶುಕ್ರವಾರ ನಡೆದ 6ನೇ ಸುತ್ತಿನ ಪಂದ್ಯದಲ್ಲಿಯೂ ಕೂಡ ವಿಶ್ವನಾಥ್‌ ಆನಂದ್‌ ಸೋಲನ್ನು ಅನುಭವಿಸಿದ್ದರು. ಈ ಮೂಲಕ 12 ಸುತ್ತುಗಳ ಟೂರ್ನಿಯಲ್ಲಿ 2-4 ಅಂತರದಿಂದ ಹಿನ್ನಡೆಯನ್ನು ಅನುಭವಿಸಿದ್ದಾರೆ.

ಟೂರ್ನಿ ಇದೀಗ ಮಧ್ಯಭಾಗ ಪ್ರವೇಶಿಸಿದ್ದು, ಇನ್ನು 6 ಸುತ್ತುಗಳು ಬಾಕಿ ಇವೆ. ತವರಿನಲ್ಲಿ ಪ್ರಶಸ್ತಿ ಉಳಿಸಿಕೊಳ್ಳಬೇಕಾದ ಒತ್ತಡದಲ್ಲಿರುವ ಆನಂದ್‌ ಮೇಲೆ ಇದೀಗ ಮತ್ತಷ್ಟು ಒತ್ತಡ ಬಿದ್ದಂತಾಗಿದ್ದು, ಟೂರ್ನಿ ಜೀವಂತವಾಗಿ ಉಳಿಯಬೇಕಾದರೆ ಆನಂದ್‌ ಉಳಿದ ಪಂದ್ಯಗಳಲ್ಲಿ 2ರಲ್ಲಿ ಗೆದ್ದು ಉಳಿದ ಪಂದ್ಯಗಳನ್ನು ಡ್ರಾ ಮಾಡಿಕೊಳ್ಳಬೇಕಿದೆ.

ಆನಂದ್‌ ಮತ್ತು ಕಾರ್ಲ್ಸನ್‌ ನಡುವಣ ಮೊದಲ ನಾಲ್ಕು ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡರೆ, 5 ಮತ್ತು 6ನೇ ಪಂದ್ಯವನ್ನು ಗೆದ್ದ ಕಾರ್ಲ್ಸನ್‌ ಸ್ಪಷ್ಟ ಮೇಲುಗೈ ಸಾಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ