ವಿಶ್ವ ದೇಹಧಾರ್ಡ್ಯ ಸ್ಪರ್ಧೆ: ಭಾರತಕ್ಕೆ ಎರಡು ಸ್ವರ್ಣ ಪದಕ

ಮಂಗಳವಾರ, 19 ನವೆಂಬರ್ 2013 (19:38 IST)
PR
ವಿಶ್ವ ದೇಹಧಾರ್ಡ್ಯ ಸ್ಪರ್ಧೆಯಲ್ಲಿ ಭಾರತಕ್ಕೆ ಎರಡು ಚಿನ್ನದ ಪದಕ ದೊರಕಿದೆ.

90 ಕಿ.ಗ್ರಾಂ ಭಾರದ ಪುರುಷ ವಿಭಾಗದ ಸ್ಪರ್ಧೆಯಲ್ಲಿ ರಾಜೇಂದ್ರನ್‌ ಚಿನ್ನದ ಪದಕ ಪಡೆದಿದ್ದಾರೆ. ಅಂಕುಶ ಶರ್ಮಾ 85 ಕಿಂಗ್ರಾಂ ಭಾರದ ಸ್ಪರ್ಧೆಯಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಆದರೆ ರವಿವಾರ ನಡೆದ ಪುರುಷ ವಿಭಾಗದ ದೇಹಧಾರ್ಢ್ಯ ಸ್ಪರ್ದೆಯಲ್ಲಿ ಮುಖ್ಯ ಪ್ರಶಸ್ತಿ ಇರಾನ್‌ ತನ್ನದಾಗಿಸಿಕೊಂಡಿದೆ.

ಇರಾನ್‌ ದೇಶದ ರೆಜಾ ನೂರಿ ಉತ್ತಮ ಪ್ರದರ್ಶನ ನೀಡಿ ಮಿಸ್ಟರ್‌ ಯುನಿವರ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಮಹಿಳಾ ವಿಭಾಗದಲ್ಲಿ ಹಂಗೇರಿಯ ಮಹಿಳೆಯರು ಗೆಲುವನ್ನು ಸಾಧಿಸಿದರು. ಮುಂದಿನ ವರ್ಷ ನಡೆಯುವ ವಿಶ್ವ ದೇಹಧಾರ್ಡ್ಯ ಸ್ಪರ್ಧೆಯ ಆತಿಥ್ಯ ಭಾರತ ವಹಿಸಿಕೊಳ್ಳಲಿದೆ.

ವೆಬ್ದುನಿಯಾವನ್ನು ಓದಿ