ವುಡ್ಸ್ : ಏಕಾಂಗಿಯಾಗಿ 34ನೇ ಜನ್ಮದಿನಾಚರಣೆ

ಬುಧವಾರ, 30 ಡಿಸೆಂಬರ್ 2009 (15:13 IST)
ದಾಂಪತ್ಯದ್ರೋಹದ ವಿವಾದದ ಸುಳಿಗೆ ಸಿಲಕಿದ ಗಾಲ್ಫ್ ಆಟಗಾರ ಟೈಗರ್ ವುಡ್ಸ್‌ ಇಂದು 34ನೇ ವರ್ಷದ ಜನ್ಮದಿನ. ಕುಟುಂಬದ ಸದಸ್ಯರ. ಗೆಳೆಯರ, ನಟಿಯರ ಅನುಪಸ್ಥಿತಿಯ ಮಧ್ಯೆಯ ಏಕಾಂಗಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಬೇಕಾಯಿತು.

ಖ್ಯಾತ ತಾರೆಯರು ಹಾಗೂ ಇತರ ಮಹಿಳೆಯರ ವಿರುದ್ಧ ಲೈಂಗಿಕ ಸಂಪರ್ಕದಲ್ಲಿದ್ದರು ಎನ್ನುವ ಪ್ರತಿನಿತ್ಯ ಆರೋಪಗಳಿಂದ ತಪ್ಪಿಸಿಕೊಳ್ಳಲು, ತಮ್ಮ ಖಾಸಗಿ ನಾವೆಯಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನವೆಂಬರ್ 27 ರಂದು ನಡೆದ ಅಪಘಾತದ ನಂತರ ವುಡ್ಸ್ ಜೀವನದಲ್ಲಿ ಮಹತ್ತರ ತಿರುವು ಪಡೆದು ಅನೇಕ ಮಹಿಳೆಯರೊಂದಿಗೆ ಲೈಂಗಿಕ ಸಂಪರ್ಕಪಡೆದಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಪತ್ನಿ ಎಲಿನ್ ನೊರ್ದೆಗ್ರೆನ್ ನಡುವೆ ವಿರಸಕ್ಕೆ ನಾಂದಿಯಾಯಿತು.

ವುಡ್ಸ್ ಪತ್ನಿ ಎಲಿನ್ ನೊರ್ದೆಗ್ರೆನ್, ತನ್ನ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಏತನ್ಮಧ್ಯೆ, ವುಡ್ಸ್ ಗಾಲ್ಫ್‌ಗೆ ಅನಿರ್ಧಿಷ್ಠಾವಧಿ ನಿವೃತ್ತಿ ಘೋಷಿಸಿದ್ದಾರೆ.

ವೆಬ್ದುನಿಯಾವನ್ನು ಓದಿ