ಶೂಟಿಂಗ್: ಶ್ರೇಯಾಸಿಗೆ ಚಿನ್ನ

ಭಾನುವಾರ, 31 ಮೇ 2009 (10:41 IST)
ಫಿನ್ಲೆಂಡ್‌ನ ಒರ್ಮಿಟಿಲ್ಲಾದಲ್ಲಿ ನಡೆಯುತ್ತಿರುವ ಶೂಟಿಂಗ್ ಜೂನಿಯರ್ ಶಾಟ್‌ಗನ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಡಬಲ್ ಟ್ರ್ಯಾಪ್ ವೈಯಕ್ತಿಕ ವಿಭಾಗದಲ್ಲಿ ಭಾರತದ ಶ್ರೇಯಾಸಿ ಸಿಂಗ್ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಗುರುವಾರ ನಡೆದ ಇದೇ ಚಾಂಪಿಯನ್‌ಷಿಪ್‌ನ ಪುರುಷರ ವೈಯಕ್ತಿಕ ಹಾಗೂ ತಂಡ ವಿಭಾಗದಲ್ಲಿ ಭಾರತ ಎರಡು ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು.

ವೆಬ್ದುನಿಯಾವನ್ನು ಓದಿ