ಸಂತೋಷ ಟ್ರೋಫಿ: ಫೈನಲ್‌ನಲ್ಲಿ ಮಿಜೋರಾಂ- ರೈಲ್ವೆ ತಂಡ ಹಣಾಹಣಿ

ಶನಿವಾರ, 8 ಮಾರ್ಚ್ 2014 (13:30 IST)
PR
ಸಿಲಿಗುರಿ: ಸಂತೋಷ ಟ್ರೋಫಿಗಾಗಿ ನಡೆಯುತ್ತಿರುವ 68ನೇ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನಶಿಪ್‌ ನಲ್ಲಿ ಮಿಜೋರಾಂ ತಂಡ ತಮಿಳುನಾಡು ತಂಡವನ್ನು 3-1 ಅಂತರದಿಂದ ಸೋಲಿಸುವದರ ಮೂಲಕ ಫೈನಲ್‌‌ನಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

ರವಿವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಮಿಜೋರಾಂ ತಂಡ ರೈಲ್ವೇ ತಂಡದ ವಿರುದ್ದ ಸೆಣಸಾಡಲಿದ್ದಾರೆ. ಭಿಡಂತಾ ತಂಡ ಸೆಮಿಫೈನಲ್‌‌ನಲ್ಲಿ ಮಹಾರಾಷ್ಟ್ರ ತಂಡವನ್ನು 4-2 ಅಂತರದಿಂದ ಸೋಲಿಸಿ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.

ಎರಡು ಬಾರಿ ಫೈನಲ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ತಮಿಳುನಾಡು ತಂಡ ಮೊದಲ ಸೆಮಿಫೈನಲ್‌‌ನಲ್ಲಿ ಎ ರಿಗನ ಗಿಂತ ಮೊದಲ ಆರ್ಧಾವಧಿಯಲ್ಲಿ ದಾಖಲಿಸಿದ ಗೋಲ್ ಸಹಾಯದಿಂದ ಮಧ್ಯಂತರದವರೆಗು 1-0 ಅಂತರದಿಂದ ಮುನ್ನಡೆಯಲ್ಲಿತ್ತು.

ಮಿಜೋರಾಂ ತಂಡ 62 ನೇ ನಿಮಿಷದಲ್ಲಿ ಡೆವಿಡ್ ಲಾಲರಿನ್‌‌ಮುವಾನಾರ ಗೋಲಿನ ಸಹಾಯದಿಂದ ಪಂದ್ಯದ ಕೊನೆಯ ಕ್ಷಣದಲ್ಲಿ ಮುನ್ನಡೆ ಸಾಧಿಸಿತ್ತು. ಜಿಕೆ ಜೋರೆಮಾಸಂಗಾ ( 94ನೇ ನಿಮಿಷ ) ಮತ್ತು ಲಾಲರಿನ್‌ಮುವಾನ್ (119ನೇ ನಿಮಿಷ) ದಲ್ಲಿ ಗೋಲನ್ನು ಗಳಿಸುವ ಮೂಲಕ ಸೆಮಿಪೈನಲ್‌ನಲ್ಲಿ ಗೆಲುವು ಸಾಧಿಸಿದೆ.

ವೆಬ್ದುನಿಯಾವನ್ನು ಓದಿ