ಸಾಂಪ್ರಸ್‌ ಜಗತ್ತಿನ ಉತ್ತಮ ಆಟಗಾರ

ಶುಕ್ರವಾರ, 23 ನವೆಂಬರ್ 2007 (11:57 IST)
ಟೆನಿಸ್ ಆಟಗಾರ ಪೀಟ್ ಸಾಂಪ್ರಸ್ ಇಲ್ಲಿಯವರೆಗೆ ಆಟವಾಡುತ್ತಿದ್ದಲ್ಲಿ ಜಗತ್ತಿನ ಪ್ರಮುಖ ಐದು ಮಂದಿ ಆಟಗಾರರಲ್ಲಿ ಒಬ್ಬರಾಗಿರುತ್ತಿದ್ದರು ಎಂದು ಜಗತ್ತಿನ ನಂಬರ್ ಒನ್ ಆಟಗಾರ ರೋಜರ್ ಫೆಡರರ್ ತಿಳಿಸಿದ್ದಾರೆ.

2002ರಲ್ಲಿ ನಡೆದ ಅಮೆರಿಕ ಒಪನ್ ನಂತರ 14 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಪಡೆದ ಸಾಂಪ್ರಸ್ ಗುರುವಾರದಂದು ನಡೆದ ಪ್ರದರ್ಶನ ಪಂದ್ಯದಲ್ಲಿ ಫೆಡರರ್ ವಿರುದ್ದ ಉತ್ತಮವಾಗಿ ಪ್ರದರ್ಶನ ನೀಡಿ ತಾವು ಇನ್ನು ಪ್ರಸ್ತುತ ಎಂದು ತೋರಿಸಿಕೊಟ್ಟಿದ್ದಾರೆ.

ಸಾಂಪ್ರಸ್ 7-6 7-5 ಸೆಟ್‌ಗಳಿಂದ ಸೋಲನುಭವಿಸಿದರೂ 210 ಕಿ.ಮಿ. ಪ್ರತಿ ಗಂಟೆಗೆ ವೇಗದಲ್ಲಿ ಸರ್ವಮಾಡಿ ಅಚ್ಚರಿ ಮೂಡಿಸಿದರು.

ಸಾಂಪ್ರಸ್ ಅವರ ಸರ್ವ್‌ನ ವೇಗ ಅಪಾಯಕಾರಿಯಾಗಿದೆ ಎಂದು ಸಾಂಪ್ರಸ್ ಅವರ ದಾಖಲೆಯನ್ನು ಸರಿಗಟ್ಟಲು ಕೇವಲ ಎರಡು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳ ಕೊರತೆ ಇರುವ ಜಗತ್ತಿನ ನಂಬರ್ ಒನ್ ಆಟಗಾರ ಫೆಡರರ್ ತಿಳಿಸಿದ್ದಾರೆ.

ಸಾಂಪ್ರಸ್ ಇವತ್ತಿಗೂ ಟೆನಿಸ್ ಆಟವಾಡಿದ್ದಲ್ಲಿ ಜಗತ್ತಿನ ಐದು ಮಂದಿ ಆಟಗಾರರಲ್ಲಿ ಒಬ್ಬರಾಗಿರುತ್ತಿದ್ದರು. ಆದರೆ ಅವರು ಮರಳಿ ಬರುವ ಯೋಜನೆಗಳಿಲ್ಲ ಎಂದು ಫೆಡರರ್ ಹೇಳಿದ್ದಾರೆ.

ನಾವು ಆಟವಾಡುವಾಗ ಉತ್ತಮವಾಗಿ ಸರ್ವ ಮಾಡುತ್ತಿದ್ದು, ಸ್ಟೇಫನ್ ಎಡಬರ್ಗ್, ಬೋರಿಸ್ ಬೇಕರ್,ಗೋರಾನ್ ಇವಾನಸೊವಿಕ್ ಮತ್ತು ಇನ್ನಿತರರು ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರು ಎಂದು ಸಾಂಪ್ರಸ್ ಸ್ಮರಿಸಿದರು.

ಮಲೇಷಿಯಾದ 50 ವರ್ಷಗಳ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಪ್ರದರ್ಶನ ಪಂದ್ಯ ಆಯೋಜಿಸಲಾಗಿತ್ತು

ವೆಬ್ದುನಿಯಾವನ್ನು ಓದಿ