ಸಾನಿಯಾ, ಬೋಪಣ್ಣಗೆ ಮಿಶ್ರ ಡಬಲ್ಸ್ ಜಯ

ಮಂಗಳವಾರ, 1 ಜನವರಿ 2008 (17:13 IST)
WD
ಟೆನಿಸ್ ತಾರೆ ಸಾನಿಯ ಮಿರ್ಜಾ ಮತ್ತು ರೋಹನ್ ಬೋಪಣ್ಣ ಆಸ್ಟ್ರೇಲಿಯದ ಆಲಿಸಿಯ ಮೊಲಿಕ್ ಮತ್ತು ಪೀಟರ್ ಲುಕ್‌ಜಾಕ್ ವಿರುದ್ಧ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಜಯಿಸುವ ಮೂಲಕ ಇಲ್ಲಿ ನಡೆಯುತ್ತಿರುವ ಹಾಪ್‌ಮ್ಯಾನ್ ಕಪ್ ಗ್ರೂಪ್ ಎ ಪಂದ್ಯದಲ್ಲಿ ಪ್ರಥಮ ಜಯವನ್ನು ದಾಖಲಿಸಿದ್ದಾರೆ.

ಮೊದಲ ಸೆಟ್‌‌ನ್ನು 1-1ರಿಂದ ಡ್ರಾ ಮಾಡಿಕೊಂಡ ಬಳಿಕ ಭಾರತ ದ್ವಯರು 77 ನಿಮಿಷಗಳ ಕಾಲ ಶತಾಯ ಗತಾಯ ಹೋರಾಟ ಮಾಡಿ 2-6, 6-4, 6-7(11/13)ರಲ್ಲಿ ಜಯಗಳಿಸಿದರು. ಈ ಜಯದೊಂದಿಗೆ ಅಮೆರಿಕ ವಿರುದ್ಧ ಆರಂಭದ ಪಂದ್ಯದಲ್ಲಿ ಸೋಲನುಭವಿಸಿದ ಭಾರತದ ಜೋಡಿ ಪಂದ್ಯಾವಳಿಯಲ್ಲಿ ಮುಂದುವರಿಯುವ ಅವಕಾಶವನ್ನು ಜೀವಂತವಿರಿಸಿದೆ.

ಇದಕ್ಕೆ ಮುನ್ನ, ಸಾನಿಯಾ ಮೋಲಿಕ್ ಅವರಿಂದ ಕಠಿಣ ಸವಾಲು ಎದುರಿಸಿದ ಬಳಿಕ ಮಹಿಳೆಯರ ಸಿಂಗಲ್ಸ್ ಪಂದ್ಯವನ್ನು 2-6, 6-2 ಮತ್ತು 4-6ರಿಂದ ಗೆದ್ದುಕೊಂಡು ಭಾರತಕ್ಕೆ 1-0 ಜಯ ದೊರಕಿಸಿಕೊಟ್ಟರು. ಆದರೆ ಬೋಪಣ್ಣ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಲುಕ್‌ಜ್ಯಾಕ್‌ಗೆ 7-6 ಮತ್ತು 6-3ರಲ್ಲಿ ಸೋಲುವ ಮೂಲಕ ಪಂದ್ಯ ಸಮನಾಗಿಸಲು ಅವಕಾಶ ನೀಡಿದರು.

ವೆಬ್ದುನಿಯಾವನ್ನು ಓದಿ