ಸಿಂಗಾಪುರ್‌ ಓಪನ್‌‌‌‌‌ : ಮೊದಲ ಸುತ್ತಿನಲ್ಲಿಯೇ ಸೈನಾ ನೆಹ್ವಾಲ್‌‌‌‌ ನಿರ್ಗಮನ

ಗುರುವಾರ, 10 ಏಪ್ರಿಲ್ 2014 (16:55 IST)
PR
ಸಿಂಗಾಪುರ್‌‌ ಸೂಪರ್ ಸೀರಿಜ್‌ ಬ್ಯಾಡ್ಮಿಂಟನ್‌‌‌‌‌‌‌‌ನಲ್ಲಿ ಸೈನಾ ನೆಹ್ವಾಲ್‌‌‌ ಮೊದಲ ಸುತ್ತಿನಲ್ಲಿಯೇ ತಮ್ಮ ಕಳಪೆ ಪ್ರದರ್ಶನದಿಂದ ನಿರ್ಗಮಿಸಿದ್ದಾರೆ. ಸೈನಾ ಜಪಾನಿನ ಎರಿಕೊ ಹಿರೊಸ್‌‌‌‌ರಿಂದ ಸೋಲನ್ನು ಅನುಭವಿಸಿದ್ದಾರೆ. ಭಾರತದ ಸಾಯಿ ಪ್ರಣಿತಾ , ಎಚ್‌‌‌ಎಚ್‌ ಪ್ರಣಯ ಮತ್ತು ಪಿಸಿ ತುಲಸಿ ಎರಡನೇ ಸುತ್ತಿನಲ್ಲಿ ಪ್ರವೇಶ ಪಡೆದಿದ್ದಾರೆ.

ವಿಶ್ವದ ಎಂಟನೇ ಶ್ರೇಯಾಂಕಿತ ಆಟಗಾರ್ತಿ ಸೈನಾ ತಮ್ಮ 1 ಗಂಟೆ ಎರಡು ನಿಮಿಷದವರೆಗೆ ನಡೆದ ಪಂದ್ಯದಲ್ಲಿ ತಮಗಿಂತ ಕಡಿಮೆ ಶ್ರೇಯಾಂಕಿತ ಆಟಗಾರ್ತಿಯಿಂದ 21-16, 15-21, 11-21 ಸೆಟ್‌‌ಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ.

ಲಂಡನ್‌ ಒಲಂಪಿಕ್‌‌‌ನಲ್ಲಿ ಕಂಚಿನ ಪದಕ ವಿಜೇತೆ ಸೈನಾ ತಮ್ಮ ಮೊದಲ ಪಂದ್ಯ ಸುಲಭದಿಂದ ಗೆದ್ದಿದ್ದಾರೆ. ಇವರು 5-2 ಅಂತರದಿಂದ ಮನ್ನಡೆ ಸಾಧಿಸಿದ್ದರು . ಇದರ ನಂತರ 13-4 ಅಂತರದ ಸೆಟ್‌‌‌ಗಳನ್ನು ಗಳಿಸಿದರು ಮತ್ತು 21-16 ಸೆಟ್‌‌ಗಳನ್ನು ತಮ್ಮ ಜೋಳಿಗೆಯಲ್ಲಿ ಹಾಕಿಕೊಂಡರು.

ಎರಡನೇ ಪಂದ್ಯದಲ್ಲಿ ಇವರು 4-2 ಸೆಟ್‌‌ಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರು. ಆದರೆ ಜಪಾನ್‌‌ ದೇಶದ ಎದುರಾಳಿ 10-4 ಸೆಟ್‌ಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರು. ಇದರ ನಂತರ ಹೊರೋಸ ಮುನ್ನಡೆಯತ್ತ ಸಾಗಿದರು. ಅಂತಿಮ ಪಂದ್ಯದಲ್ಲಿ ಜಪಾನ ಆಟಗಾರ್ತಿ 5-0 ಸೆಟ್‌ಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರು ಮತ್ತು ಸೈನಾಗೆ ಯಾವುದೇ ರೀತಿಯ ಗೆಲುವನ್ನು ಸಾಧಿಸಲು ಬಿಡಲಿಲ್ಲ.

ವೆಬ್ದುನಿಯಾವನ್ನು ಓದಿ