ಸೋನಿ ಓಪನ್‌: ಅಗ್ನಿಸ್ಕಾ ರಾಡ್ವಾಂಸ್ಕಾಗೆ ಗೆಲುವು

ಭಾನುವಾರ, 23 ಮಾರ್ಚ್ 2014 (16:20 IST)
PTI
ಪೋಲೆಂಡ್‌ನ ಅಗ್ನಿಸ್ಕಾ ರಾಡ್ವಾಂಸ್ಕಾ ಇಲ್ಲಿ ನಡೆಯುತ್ತಿರುವ ಸೋನಿ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ರಾಡ್ವಾಂಸ್ಕಾ 6-0, 6-4ರಲ್ಲಿ ಸ್ವಿಟ್ಜರ್‌ಲೆಂಡ್‌ನ ರೊಮೀನಾ ಒಪ್ರಾಂಡಿ ಅವರನ್ನು ಮಣಿಸಿದರು. ಮೂರನೇ ಶ್ರೇಯಾಂಕ ಪಡೆದಿರುವ ರಾಡ್ವಾಂಸ್ಕಾ ಈ ಗೆಲುವಿಗಾಗಿ 74 ನಿಮಿಷ ತೆಗೆದುಕೊಂಡರು. ಆದರೆ ಪಂದ್ಯ ಮಧ್ಯದಲ್ಲಿ ಅವರು ಮಂಡಿ ನೋವಿಗೆ ಒಳಗಾದರು. ಪೋಲೆಂಡ್‌ನ ಈ ಆಟಗಾರ್ತಿ 2012ರಲ್ಲಿ ಇಲ್ಲಿ ಚಾಂಪಿ ಯನ್‌ ಆಗಿದ್ದರು.

ಮಹಿಳೆಯರ ವಿಭಾಗದ ಎರಡನೇ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ಅಮೆರಿಕದ ವೀನಸ್ ವಿಲಿಯಮ್ಸ್‌ 6-3, 6-3ರಲ್ಲಿ ಸ್ಲೊವಾಕಿಯಾದ ಅನಾ ಶ್ಮಿಡ್ಲೊವಾ ಎದುರೂ, ಫ್ರಾನ್ಸ್‌ನ ಅಲಿಜ್‌ ಕಾರ್ನೆಟ್‌ 6-2, 6-7, 6-4ರಲ್ಲಿ ಜರ್ಮನಿಯ ಆ್ಯಂಡ್ರಿಯಾ ಪೆಟ್ಕೊವಿಕ್‌ ವಿರುದ್ಧವೂ, ಸ್ಲೊವಾಕಿ ಯಾದ ಡೊಮಿನಿಕಾ ಸಿಬುಲ್ಕೋವಾ 6-1, 6-2ರಲ್ಲಿ ಆಸ್ಟ್ರೇಲಿಯಾದ ಯೋನ್‌ ಮೆಸ್ಬರ್ಗರ್‌ ಮೇಲೂ, ಅಮೆ ರಿಕದ ವಾರ್ವಾರಾ ಲೆಪ್ಚೆಂಕೊ 6-2, 2-6, 7-6ರಲ್ಲಿ ಸರ್ಬಿಯಾದ ಎಲೆನಾ ಜಾಂಕೋವಿಕ್‌ ಎದುರೂ ಗೆದ್ದರು.

ಅಮೆರಿಕದ ಮೇಡಿಸನ್‌ ಕೀಸ್‌ 6-4, 6-2ರಲ್ಲಿ ಸ್ಲೊವಾಕಿಯಾದ ಡೇನಿಯೆಲಾ ಹಂಟು ಚೋವಾ ಎದುರು ಜಯ ಗಳಿಸಿದರು.

ಪುರುಷರ ವಿಭಾಗದಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಚ್, ಬ್ರಿಟನ್‌ನ ಆ್ಯಂಡಿ ಮರ್ರೆ ಹಾಗೂ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಮೂರನೇ ಸುತ್ತು ಪ್ರವೇಶಿಸಿದರು.

ವೆಬ್ದುನಿಯಾವನ್ನು ಓದಿ