ಸ್ನೂಕರ್‌ನಲ್ಲಿ ಮಿಂಚಿದ ಭಾರತೀಯ ಮಹಿಳೆಯರು

ಸೋಮವಾರ, 2 ಡಿಸೆಂಬರ್ 2013 (16:37 IST)
PR
ಐವಿಪಿಎಸ್‌ಎಫ್ ವಿಶ್ವ ಸ್ನೂಕರ್‌ ಚಾಂಪಿಯನ್‌ಶಿಪ್‌‌ನಲ್ಲಿ ಭಾರತೀಯ ಮಹಿಳಾ ಆಟಗಾರರಾದ ವಿಧ್ಯಾ ಪಿಲ್ಲೆ, ಅರಾಂತ್ಜಾ ಸಾಂಚಿತ್ ಮತ್ತು ವರ್ಷಾ ಸಂಜೀವ್ ತಮ್ಮ ತಮ್ಮ ವೈಯಕ್ತಿಕ ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿದ್ದಾರೆ.

ಎರಡು ಸಲ ಕಂಚಿನ ಪದಕ ಪಡೆದ ವಿದ್ಯಾ ತನ್ನ ಎದುರಾಳಿಯಾದ ಆಷ್ಟ್ರೇಲಿಯಾದ ಜೆಸಿಕಾ ವುಡ್ಸ್‌ರನ್ನು 3-1 ಅಂತರದಿಂದ ಸೋಲಿಸುವುದರ ಮೂಲಕ ಸತತ ಮೂರನೇ ಬಾರಿ ಗೆಲುವನ್ನು ಸಾಧಿಸಿದ್ದಾರೆ. ಅರಾಂತ್ಜಾ 1-2 ಅಂತರದಿಂದ ನಂತರ ರೂಸ್‌ನ ದಾರಿಯಾ ಸಿರೋತಿನಾರನ್ನು 3-2 ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ .

ವರ್ಷಾ ತನ್ನ ಎದುರಾಳಿಯಾದ ಪೊಲೆಂಡ್‌ನ ಪಾವಿಸ್ನಕಾರನ್ನು 3-0 ಅಂತರದಿಂದ ಸೋಲಿಸಿದ್ದಾರೆ. ಪುರುಷ ವಿಭಾಗದಲ್ಲಿ ಶಾಬಾಜ್‌ ಆದಿಲ್‌ ಖಾನ್‌ ತನ್ನ ಎದುರಾಳಿಯಾದ ದಕ್ಷೀಣ ಆಫ್ರಿಕಾದ ಜೆಕಬ್ಸ ವಾನ್ ಜಾಸ್ರವೆಲ್ಡ್‌ರನ್ನು ನೇರ ಪ್ರೆಮ್‌ನಲ್ಲಿ 4-0 ಅಂತರದಿಂದ ಸೋಲುಸಿದ್ದಾರೆ.

ವೆಬ್ದುನಿಯಾವನ್ನು ಓದಿ