ಹಾಕಿ ಇಂಡಿಯಾ ಲೀಗ್ : ಕಲಿಂಗಾ ವಿರುದ್ಧ ದೆಹಲಿ ತಂಡಕ್ಕೆ ಭರ್ಜರಿ ಜಯ

ಶುಕ್ರವಾರ, 31 ಜನವರಿ 2014 (16:38 IST)
PR
ನವದೆಹಲಿ: ಮೇಜರ್ ಧ್ಯಾನಚಂದ್‌ ನ್ಯಾಶನಲ್‌ ಸ್ಟೇಡಿಯಂನಲ್ಲಿ ನಡೆದ ಹಾಕಿ ಇಂಡಿಯಾ ಲೀಗ್‌ನ ಎರಡನೇ ಪಂದ್ಯದಲ್ಲಿ ದೆಹಲಿ ವೆವರಾಯಿಡರ್ಸ್ ತಂಡದ ಆಟಗಾರ ರೂಪಿಂದ್ರ್ ಪಾಲ್ ಸಿಂಗ್‌‌ರ ಎರಡು ಗೋಲುಗಳ ನೆರವಿನಿಂದ ಎದುರಾಳಿ ಕಾಲಿಂಗಾ ಲಾಂಸರ್ಸ ವಿರುದ್ದ 5-0 ಅಂತರದಿಂದ ಭರ್ಜರಿ ಗೆಲುವನ್ನು ಸಾಧಿಸಿದೆ .

ಕಳೆದ ಪಂದ್ಯದಲ್ಲಿ ರಾಂಚಿ ರಾಯಿನೋಜ್‌‌ ತಂಡದಿಂದ ಸೋಲು ಕಂಡಿದ್ದ ದೆಹಲಿ ತಂಡ, ಈ ಗೆಲುವಿನ ಮೂಲಕ 3 ಪಂದ್ಯಾವಳಿಗಳಲ್ಲಿ 2 ಪಂದ್ಯದಲ್ಲಿ ಗೆಲುವನ್ನು ಸಾಧಿಸಿವುದರ ಮೂಲಕ 11 ಅಂಕಗಳನ್ನು ಗಳಿಸಿ ಗುಂಪಿನಲ್ಲಿ ಅಗ್ರ ಶ್ರೇಣಿಗೆ ತಲುಪಿದೆ. ಸರದಾರ್ ಸಿಂಗ್‌‌ರ ತಂಡ ಪಂದ್ಯದ ಪ್ರತಿಯೊಂದು ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದ ಪ್ರೇಕ್ಷಕರನ್ನು ರಂಜಿಸುವಲ್ಲಿ ದೆಹಲಿ ತಂಡ ಯಶಸ್ವಿಯಾಗಿದೆ.

ವೆಬ್ದುನಿಯಾವನ್ನು ಓದಿ