2016ರ ರಿಯೊ ಒಲಿಂಪಿಕ್ಸ್‌: ತಿಳಿಯಬೇಕಾದ 15 ಸಂಗತಿಗಳು

ಶುಕ್ರವಾರ, 22 ಜುಲೈ 2016 (18:54 IST)
ದಕ್ಷಿಣ ಅಮೆರಿಕದ ಬ್ರೆಜಿಲ್‌ನಲ್ಲಿ ಮೊದಲ ಒಲಂಪಿಕ್ ಕ್ರೀಡಾಕೂಟವು ಆಗಸ್ಟ್ 5ರಿಂದ ಆರಂಭವಾಗಲಿದ್ದು, ಈ ಒಲಿಂಪಿಕ್ಸ್‌ನ ಅಂಕಿಅಂಶಗಳು ಕೆಳಗಿವೆ: 
 
206 ರಾಷ್ಟ್ರಗಳು ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದು, 42 ಕ್ರೀಡೆಗಳಲ್ಲಿ ಸ್ಪರ್ಧಿಸಲಿವೆ. 4924 ಪದಕಗಳನ್ನು ಒಲಿಂಪಿಕ್ ವಿಜೇತರಿಗೆ ವಿತರಿಸಲಾಗುತ್ತದೆ. 17 ದಿನಗಳ ಕಾಲ ನಡೆಯುವ ಒಲಿಂಪಿಕ್ ವೈಭವದಲ್ಲಿ 4 ಕ್ರೀಡಾಂಗಣಗಳನ್ನು ಸಜ್ಜು ಮಾಡಲಾಗಿದೆ.  25,000 ಟೆನಿಸ್ ಚೆಂಡುಗಳು, 8400 ಶಟಲ್ ಕಾಕ್‌ಗಳು,  315 ಕುದುರೆಗಳು, 34,000 ಹಾಸಿಗೆಗಳು, 100,000 ಕುರ್ಚಿಗಳನ್ನು ಒಲಿಂಪಿಕ್ಸ್‌ನಲ್ಲಿ ಬಳಸಲಾಗುತ್ತದೆ.

11 ದಶಲಕ್ಷ ಭೋಜನಗಳಿಗೆ ವ್ಯವಸ್ಥೆ ಮಾಡಲಾಗುತ್ತದೆ. 21 ಜಂಬೊ ಜೆಟ್‌ಗಳನ್ನು ರಿಯೊಗೆ ಅಥ್ಲೀಟ್‌ಗಳನ್ನು ಸಾಗಿಸಲು ಬಳಸಲಾಗುತ್ತದೆ.  3.6 ದಶಕೋಟಿ ಜನರು ಜಗತ್ತಿನಾದ್ಯಂತ ಒಲಿಂಪಿಕ್ ಕ್ರೀಡಾಕೂಟವನ್ನು ವೀಕ್ಷಿಸಲಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ