2015ರ ಫುಟ್ಬಾಲ್‌ ವೈದ್ಯಕೀಯ ಸಮ್ಮೇಳನಕ್ಕೆ ಭಾರತ ಆತಿಥ್ಯ

ಮಂಗಳವಾರ, 12 ನವೆಂಬರ್ 2013 (19:47 IST)
PR
2015 ರಲ್ಲಿ ನಡೆಯಲಿರುವ 5ನೇ ಎಎಫ್‌ಸಿ ವೈದ್ಯಕೀಯ ಸಮ್ಮೇಳನದ ಆತಿಥ್ಯವನ್ನು ಭಾರತ ವಹಿಸಿಕೊಂಡಿದೆ. ಆಯೋಜಕರು ಇಂದು ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.

ಈ ಸಮ್ಮೇಳನದಲ್ಲಿ ದೇಶದ ಜನರಿಗೆ ಪುಟ್ಬಾಲ್‌ ಆಟದ ಹಿಂದಿರುವ ವೈದ್ಯಕೀಯ ವಿಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಜ್ಞರು ನೀಡಲಿದ್ದಾರೆ. ಇದರಿಂದಾಗಿ ಫುಟ್ಬಾಲ್ ಆಟಗಾರರಿಗೆ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.

"ಮಲೇಷಿಯಾ, ಜಪಾನ್ ಮತ್ತು ಓಮನ್‌ ನಂತರ ಈಗ ಭಾರತದಲ್ಲಿ ಎಷ್ಯಾದ ಅತಿ ದೊಡ್ಡ ವೈದ್ಯಕೀಯ ಸಮ್ಮೆಳನ ಆಯೋಜಿಸುವ ಅವಕಾಶ ಈಗ ಭಾರತಕ್ಕೆ ದೊರೆತಿದೆ ಎಂದು ಎಎಫ್‌ಸಿ ವೈದ್ಯಕೀಯ ಸಮ್ಮೇಳನ ಮುಖ್ಯಸ್ಥ ಪಿಎಸ್‌‌ಎಮ್‌ ಚಂದ್ರನ್‌ ಹೇಳಿದ್ದಾರೆ

ಈ ಸಮ್ಮೇಳನ 2015 ರ ಎಪ್ರಿಲ್‌ ತಿಂಗಳಲ್ಲಿ 2ನೇ ಮತ್ತು 4ನೇ ದಿನದಂದು ನಡೆಯಲಿದೆ.


ವೆಬ್ದುನಿಯಾವನ್ನು ಓದಿ