ಆಲ್ ಇಂಗ್ಲೆಂಡ್ ಓಪನ್: ಸೆಮಿಫೈನಲ್ ಪ್ರವೇಶಿಸಿದ ಸೈನಾ ನೆಹ್ವಾಲ್

ಶನಿವಾರ, 7 ಮಾರ್ಚ್ 2015 (16:03 IST)
ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್  ಮಹಿಳಾ ಸಿಂಗಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತದ ಹೆಮ್ಮೆ.ಯ ಆಟಗಾರ್ತಿ ಸೈನಾ ನೆಹ್ವಾಲ್ ತಮ್ಮ ಚೀನಾ ಎದುರಾಳಿ ಯಿಹಾನ್ ವಾಂಗ್ ವಿರುದ್ಧ ಅತ್ಯುತ್ತಮ ಆಟ ಪ್ರದರ್ಶಿಸಿ 21-19, 21-6 ಸೆಟ್‌ಗಳ ಅಂತರದಿಂದ ಸೋಲಿಸಿ ಸೆಮಿಫೈನಲ್ ತಲುಪಿದ್ದಾರೆ.

ಒಲಿಂಪಿಕ್ ಕಂಟಿನ ಪದಕ ವಿಜೇತೆ ಸೈನಾ, ತಮ್ಮ ಎದುರಾಳಿ ವಾಂಗ್ ವಿರುದ್ಧದ 39 ನಿಮಿಷಗಳ ಹೋರಾಟದಲ್ಲಿ ಏಕಸ್ವಾಮ್ಯ ಸಾಧಿಸಿದರು. ಪಂದ್ಯದ ಗೆಲುವಿನೊಂದಿಗೆ ವಿಶ್ವ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಸೈನಾ ತಮ್ಮ ಪ್ರಸ್ತುತ ಶ್ರೇಯಾಂಕದಿಂದ ಬಡ್ತಿ ಪಡೆದಿದ್ದಾರೆ.

ಸೈನಾ ನೆಹ್ವಾಲ್ ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ವಿಶ್ವದ 18ನೇ ಶ್ರೇಯಾಂಕಿತ ಆಟಗಾರ್ತಿ ಸುನ್  ಯೂ ವಿರುದ್ಧ ಹಣಾಹಣಿ ನಡೆಸಲಿದ್ದಾರೆ.

ಕಳೆದ ಹಿಂದಿನ ಪಂದ್ಯಗಳಲ್ಲಿ ವಾಂಗ್ ವಿರುದ್ಧ ಉತತ್ಮ ಪ್ರದರ್ಶನ ನೀಡುವಲ್ಲಿ ವಿಫಲಳಾಗಿದ್ದೆ. ಆದರೆ, ಇಂದು ನನ್ನ ಬಲವಾದ ಹೊಡೆತಗಳು ಎದುರಾಳಿಯನ್ನು ಕಂಗೆಡಿಸಿದವು. ಗೆಲುವಿನಿಂದ ಸಂತೋಷವಾಗಿದೆ ಎಂದು ಸೈನಾ ನೆಹ್ವಾಲ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ