ಕ್ರೀಡಾಪಟುವಿಗಿಂತ ಮೊದಲು ನಾನು ಮಹಿಳೆ: ಸಾನಿಯಾ ಮಿರ್ಜಾ

ಮಂಗಳವಾರ, 4 ಆಗಸ್ಟ್ 2015 (19:35 IST)
ಕೆಲ ಮಹಿಳಾ ಕ್ರೀಡಾಪಟುಗಳು ಗ್ಲಾಮರ್ ಮತ್ತು ಫ್ಯಾಶನ್ ಜಗತ್ತಿಗೆ ಮಾರು ಹೋಗುತ್ತಾರೆ. ಆದರೆ, ಖ್ಯಾತ ಕ್ರೀಡಾಪಟುವಾಗಿದ್ದರೂ ಸಾಮಾನ್ಯ ಯುವತಿಗಿರುವಂತೆ ಆಸೆ ಬಯಕೆಗಳು ಕೂಡಾ ನನ್ನಲ್ಲಿವೆ ಎಂದು ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹೇಳಿದ್ದಾರೆ. 
 
ನಾನು ಮಹಿಳಾ ಕ್ರೀಡಾಪಟು ಅದಕ್ಕಿಂತ ಮೊದಲು ನಾನು ಮಹಿಳೆ. ಆದ್ದರಿಂದ ಇತರ ಮಹಿಳೆಯರಿಗಿರುವಂತೆ ನನಗೂ ಕೂಡಾ ಚಿನ್ನಾಭರಣಗಳನ್ನು ಧರಿಸುವ ಇಚ್ಚೆ ಹೊಂದಿದ್ದೇನೆ. ಕ್ರೀಡಾಪಟುವಾದ ಮಾತ್ರಕ್ಕೆ ಮಹಿಳೆಯ ಎಲ್ಲಾ ಆಶೋತ್ತರಗಳನ್ನು ಬದಿಗಿಡುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ ಎಂದಿದ್ದಾರೆ.  
 
ಇಂಡಿಯಾ ಇಂಟರ್‌ನ್ಯಾಷನಲ್ ಜ್ಯುವೆಲ್ಲರಿ ವೀಕ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಾನಿಯಾ, ನನಗೆ ರ್ಯಾಂಪ್ ಮೇಲೆ ನಡೆದಾಡಲು ತುಂಬಾ ಇಷ್ಟವಾಗುತ್ತದೆ. ಬ್ಲೆಂಡರ್ಸ್ ಪ್ರೈಡ್ ಫ್ಯಾಶನ್ ಟೂರ್, ಇಂಡಿಯನ್ ಬ್ರೈಡಲ್ ಫ್ಯಾಶನ್ ವೀಕ್ ಮತ್ತು ಗ್ಲೋಬಲ್ ಫ್ಯಾಶನ್ ವೀಕ್ ಶೋ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದರು. 
 
ಸಾನಿಯಾ ಮಿರ್ಜಾ, ಮೋನಿ ಅಗರ್‌ವಾಲ್ ಡಿಸೈನ್ ಮಾಡಿದ ಝಾಹಾರಾಕ್ಷಿ ಆಭರಣದ ಬ್ರಾಂಡ್ ಅಂಬಾಸಿಡರ್ ಆಗಿ ಹೊರಹೊಮ್ಮಿದ್ದಾರೆ.
 
ಇಂಡಿಯಾ ಇಂಟರ್‌ನ್ಯಾಷನಲ್ ಜ್ಯುವೆಲ್ಲರಿ ವೀಕ್ ಮುಂದಿನ ಗುರುವಾರದವರೆಗೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
 
ಸ್ವಿಸ್ ತಾರೆ ಮಾರ್ಟಿನ್ ಹಿಂಗಿಸ್ ಅವರೊಂದಿಗೆ ವಿಂಬಲ್ಡನ್ ಗೆಲುವು ತುಂಬಾ ಸಂತಸ ತಂದಿದೆ ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ