ಮ್ಯಾಂಚೆಸ್ಟರ್ ಬಾಂಬ್ ಸ್ಫೋಟ; ಚಾಂಪಿಯನ್ಸ್ ಟ್ರೋಫಿ ಮೇಲೆ ಕರಿನೆರಳು

ಮಂಗಳವಾರ, 23 ಮೇ 2017 (16:35 IST)
ಇಂಗ್ಲೆಂಡ್`ನ ಮ್ಯಾಂಚೆಸ್ಟರ್ ನಗರ ಅಕ್ಷರಶಃ ಬೆಚ್ಚಿಬಿದ್ದಿದೆ. ಅಮೆರಿಕದ ಪಾಪ್ ಸ್ಟಾರ್ ಅರಿಯಾನಾ ಗ್ಯ್ರಾಂಡೆ ಸಂಗೀತ ಕಾರ್ಯಕ್ರಮದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, 20ಕ್ಕೂ ಅಧಿಕ ಮಂದಿ ಮೃತರಾಗಿದ್ದು 55ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಭೀಕರ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ೈಸಿಸಿ ಚಾಂಪಿಯನ್ಸ್ ಟ್ರೋಫಿ ಮೇಲೆ ಕಾರ್ಮೋಡ ಆವರಿಸಿದೆ. ಟೂರ್ನಿಯ ಭದ್ರತೆ ವಿಚಾರ ಐಸಿಸಿ ಮತ್ತು ಬಿಸಿಸಿಐ ತಲೆ ಬಿಸಿ ಮಾಡಿದೆ.

ಆಟಗಾರರ ಭದ್ರತೆ ಬಗ್ಗೆ ಚರ್ಚಿಸಲು ಬಿಸಿಸಿಐ ತುರ್ತು ಸಭೆ ಕರೆದಿದೆ. ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಐಸಿಸಿ ಸಹ ಚಾ<ಪಪಿಯನ್ಸ್ ಟ್ರೊಫಿಗೆ ಕೈಗೊಂಡಿರುವ ಭದ್ರತಾ ಕ್ರಮಗಳನ್ನ ಮರುಪರಿಶೀಲನೆ ನಡೆಸುವುದಾಗಿ ಹೇಳಿದೆ. ಚಾಂಪಿಯನ್ಸ್ ಟ್ರೋಫಿ ಮತ್ತು ಮಹಿಳಾ ವಿಶ್ವಕಪ್ ಭದ್ರತೆ ನಮ್ಮ ಪ್ರಮುಖ ಆದ್ಯತೆ ಎಂದು ಐಸಿಸಿ ಮತ್ತು ಇಸಿಬಿ ಹೇಲಿಕೆ ಬಿಡುಗಡೆ ಮಾಡಿವೆ.

ಚಾಂಪಿಯನ್ಸ್ ಟ್ರೋಫಿಗಾಗಿ 15 ಸದಸ್ಯರ ಭಾರತ ತಂಡ ಬುಧವಾರ ಸಂಜೆ ಇಂಗ್ಲೆಂಡ್ ವಿಮಾನ ಹತ್ತಲಿದೆ. ಜೂನ್ 1 ರಿಂದ ಸರಣಿ ಆರಂಭವಾಗಲಿದ್ದು, ಇದಕ್ಕೂ ಮುನ್ನ ಭಾರತ ಎರಡು ಅಭ್ಯಾಸ ಪಂದ್ಯಗಳನ್ನಾಡಲಿದೆ. ಮೇ 28ಕ್ಕೆ ನ್ಯೂಜಿಲೆಂಡ್ ವಿರುದ್ಧ ಮತ್ತು 30ಕ್ಕೆ ಬಾಂಗ್ಲಾದೇಶ ವಿರುದ್ಧ ಭಾರತ ಅಭ್ಯಾಸ ಪಂದ್ಯವನ್ನಾಡಲಿದೆ. ಜೂನ್ 4ಕ್ಕೆ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಎಡ್ಜ್ ಬ್ಯಾಸ್ಟನ್`ನಲ್ಲಿ ಮುಖಾಮುಖಿಯಾಗಲಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ