ಟೆಂಡರ್ ಪ್ರಕ್ರಿಯೆ ಇಲ್ಲದೇ ಅಮೆರಿಕ ಟಿ20 ಪಂದ್ಯಗಳ ಪ್ರಸಾರ ಹಕ್ಕನ್ನು ಮಾರಿದ ಬಿಸಿಸಿಐ

ಬುಧವಾರ, 24 ಆಗಸ್ಟ್ 2016 (14:47 IST)
ಬಿಸಿಸಿಐ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಫ್ಲೋರಿಡಾದಲ್ಲಿ ಆಡುವ ಎರಡು ಟ್ವೆಂಟಿ 20 ಪಂದ್ಯಗಳ ಪ್ರಸಾರ ಹಕ್ಕನ್ನು ಯಾವುದೇ ಟೆಂಡರ್ ಪ್ರಕ್ರಿಯೆ ಇಲ್ಲದೇ ಮಾರಾಟ ಮಾಡಿದ ಸಂಗತಿ ಬೆಳಕಿಗೆ ಬಂದಿದೆ. ಚೆನ್ನೈ ಮೂಲದ ಟೆಕ್ ಫ್ರಂಟ್‌ಗೆ ಈ ಹಕ್ಕುಗಳನ್ನು ಮಾರಾಟ ಮಾಡಿದ್ದು, ಬಿಸಿಸಿಐ ವೆಬ್‌ಸೈಟ್‌ನಲ್ಲಿ ಪ್ರಸಾರ ಹಕ್ಕುಗಳಿಗೆ ಮೂಲ ದರವನ್ನು ಪ್ರಸ್ತಾಪಿಸಲಾಗಿದೆ.
 
ಸುಪ್ರೀಂಕೋರ್ಟ್ ನೇಮಿತ ಲೋಧಾ ಸಮಿತಿ ಶಿಫಾರಸು ಮಾಡಿದಂತೆ  ಪಾರದರ್ಶಕ ರೀತಿಯಲ್ಲಿ ಒಪ್ಪಂದ ಏರ್ಪಟ್ಟಿಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ. 
 
 ಜುಲೈ 18ರ ಸುಪ್ರೀಂಕೋರ್ಟ್ ಆದೇಶವು ಬಿಸಿಸಿಐನ ಎಲ್ಲ ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಕಡ್ಡಾಯ ಮಾಡಿತ್ತು. ಇದರಿಂದ ಯಾವುದೇ ಹಕ್ಕುಗಳ ಮಾರಾಟಕ್ಕೆ ಬಿಸಿಸಿಐ ಟೆಂಡರ್ ಕರೆಯಬೇಕಾಗಿತ್ತು. ಲೋಧಾ ಸಮಿತಿಯ ಮೂಲಗಳು ಈ ಕುರಿತು ಅಚ್ಚರಿ ವ್ಯಕ್ತಪಡಿಸಿವೆ. ಬಿಸಿಸಿಐ ಐಪಿಎಲ್ ಹಕ್ಕುಗಳಿಗೆ ಪಾರದರ್ಶಕತೆ ಮಾರ್ಗ ಹಿಡಿದಿದ್ದರೆ, ಫ್ಲೋರಿಡಾ ಪಂದ್ಯಗಳ ಹಕ್ಕುಗಳನ್ನು ಯಾವುದೇ ನಿಗದಿತ ಟೆಂಡರ್ ಪ್ರಕ್ರಿಯೆ ಇಲ್ಲದೇ ಮಾರಾಟ ಮಾಡಿದೆ.

ವೆಬ್ದುನಿಯಾವನ್ನು ಓದಿ