ಫ್ರೆಂಚ್ ಓಪನ್: ದಾಖಲೆ ಬರೆಯಲು ಸಜ್ಜಾದ ರಾಫೆಲ್ ನಡಾಲ್!

ಭಾನುವಾರ, 5 ಜೂನ್ 2022 (14:39 IST)

ಟೆನಿಸ್ ದಂತಕತೆಗಳ ಪಟ್ಟಿಯಲ್ಲಿ ಈಗಾಗಲೇ ಸ್ಥಾನ ಪಡೆದಿರುವ ಸ್ಪೇನ್ ನ ರಾಫೆಲ್ ನಡಾಲ್ ಭಾನುವಾರ ನಡೆಯಲಿರುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ರೋಲ್ಯಾಂಡ್ ಗ್ಯಾರೋಸ್ ಮೈದಾನದಲ್ಲಿ ಭಾನುವಾರ ನಡೆಯಲಿರುವ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ನಾರ್ವೆಯ 23 ವರ್ಷದ ಯುವ ಆಟಗಾರ ಕ್ಯಾಸ್ಪರ್ ರೂಡ್ ಅವರನ್ನು ರಾಫೆಲ್ ನಡಾಲ್ ಎದುರಿಸಲಿದ್ದಾರೆ.

ಆವೆ ಅಂಕಣದ ರಾಜ ಎಂ ಗೌರವಕ್ಕೆ ಪಾತ್ರರಾಗಿರುವ ನಡಾಲ್ ತಮ್ಮ ಫೇವರಿಟ್ ಫ್ರೆಂಚ್ ಓಪನ್ ನಲ್ಲಿ ಈಗಾಗಲೇ 13 ಬಾರಿ ಪ್ರಶಸ್ತಿ ಎತ್ತಿಹಿಡಿದು ದಾಖಲೆ ಬರೆದಿದ್ದು, ಈ ಸಂಖ್ಯೆಯನ್ನು 14ಕ್ಕೇರಿಸಿಕೊಳ್ಳಲಿದ್ದಾರೆ.

ನಡಾಲ್ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಗೌರವಕ್ಕೂ ಪಾತ್ರರಾಗಲಿದ್ದಾರೆ. ಅಲ್ಲದೇ 22 ಗ್ರ್ಯಾನ್ ಸ್ಲಾಮ್ ಗೆದ್ದು ಸ್ವೀಜರ್ ಲೆಂಡ್ ನ ರೋಜರ್ ಫೆಡರರ್ ಮತ್ತು ಸರ್ಬಿಯಾದ ನೊವಾಕ್ ಜೋಕೊವಿಕ್ ಅವರ ಜೊತೆ ಜಂಟಿ ಅಗ್ರಸ್ಥಾನ ಹೊಂದಿರುವ ನಡಾಲ್ ಒಂದು ಹೆಜ್ಜೆ ಮುಂದೆ ಹೋಗಿ ಮತ್ತೊಂದು ದಾಖಲೆ ಬರೆಯಲಿದ್ದಾರೆ.

ನಡಾಲ್ ಮತ್ತು ಕ್ಯಾಸ್ಪರ್ ರೋಡ್ ಟೆನಿಸ್ ಕೋರ್ಟ್ ನಲ್ಲಿ ಇದುವರೆಗೂ ಒಮ್ಮೆಯೂ ಮುಖಾಮುಖಿ ಆಗಿಲ್ಲ. ಆದರೆ ಹಲವಾರು ಬಾರಿ ಅಭ್ಯಾಸ ಪಂದ್ಯಗಳಲ್ಲಿ ಎದುರಾಗಿದ್ದು, ಪ್ರಶಸ್ತಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಮೂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ