ಇದೊಂದು ಅದ್ಭುತ ಯಶಸ್ವಿ ವರ್ಷ ಎಂದ ಸಾನಿಯಾ ಮಿರ್ಜಾ

ಮಂಗಳವಾರ, 17 ನವೆಂಬರ್ 2015 (20:17 IST)
ಎರಡು ಗ್ರ್ಯಾಂಡ್‌ಸ್ಲ್ಯಾಮ್‌ ಪ್ರಶಸ್ತಿಗಳನ್ನು ಪಡೆದು ಮಹಿಳಾ ಡಬಲ್ಸ್‌ನಲ್ಲಿ ಅಗ್ರಸ್ಥಾನ ಪಡೆದಿರುವ ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಪ್ರಸಕ್ತ ವರ್ಷ ಅದ್ಭುತ ವರ್ಷವಾಗಿತ್ತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 
ಪ್ರಾಮಾಣಿಕವಾಗಿ ಹೇಳಬಹುದಾದರೆ ಇದೊಂದು ಅದ್ಭುತ ವರ್ಷವಾಗಿತ್ತು. ವರ್ಷಾಂತ್ಯಕ್ಕೆ ವಿಶ್ವದ ನಂಬರ್ ಒನ್ ಪಟ್ಟ ದೊರಕಿರುವುದು. ವಿಶ್ವದ ನಂಬರ್ ಒನ್ ತಂಡವಾಗಿರುವುದು ಹೆಮ್ಮೆ ತಂದಿದೆ. ಆತ್ಮವಿಶ್ವಾಸದಿಂದ ಪ್ರದರ್ಶನ ನೀಡಿರುವುದು ಮರೆಯಲಾಗದ ಸಂಗತಿಯಾಗಿದೆ ಎಂದರು. 
 
ಮುಂದಿನ ವರ್ಷದ ಜನೆವರಿಯಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ಓಪನ್ ಪಂದ್ಯಾವಳಿಯಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡಲು  ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.   
 
ಒಂದು ವರ್ಷದಲ್ಲಿಯೇ ಎರಡು ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರುವುದು ಕನಸು ನನಸಾದಂತಾಗಿದೆ. ಮುಂದಿನ ವರ್ಷದ ಆರಂಭದಲ್ಲಿಯೇ ಒಂದು ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವುದು ಉತ್ತಮ ಸಂಕೇತವಾಗಿರುತ್ತದೆ ಎಂದರು. 
 
ಸಾನಿಯಾ ಮಿರ್ಜಾ ವಿಂಬಲ್ಡನ್, ಯುಎಸ್ ಓಪನ್, ಸಿಂಗಾಪೂರ್ ಓಪನ್ ಸೇರಿದಂತೆ ಇತರ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
 

ವೆಬ್ದುನಿಯಾವನ್ನು ಓದಿ