ಕೆನಡಾ ಬ್ಯಾಡ್ಮಿಂಟನ್ ಓಪನ್: ಪ್ರಶಸ್ತಿ ಮುಡಿಗೇರಿಸಿಕೊಂಡ ಜ್ವಾಲಾ- ಅಶ್ವಿನಿ ಪೊನ್ನಪ್ಪ ಜೋಡಿ

ಸೋಮವಾರ, 29 ಜೂನ್ 2015 (20:04 IST)
ಕೆನಡಾ ಓಪನ್ ಬ್ಯಾಡ್ಮಿಂಟನ್ ಓಪನ್ ಮಹಿಳಾ ಡಬಲ್ಸ್ ಪಂದ್ಯಾವಳಿಯಲ್ಲಿ ಭಾರತದ ಖ್ಯಾತ ಆಟಗಾರ್ತಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ, ತಮ್ಮ ಎದುರಾಳಿ ಅಗ್ರಶ್ರೇಯಾಂಕಿತ ಡಚ್ ಜೋಡಿಯಾದ ಇಫಿಜಾ ಮುಸ್ಕೆನ್ಸ್ ಮತ್ತು ಸೆಲೆನಾ ಪೈಯಿಕ್ ವಿರುದ್ಧ ಫೈನಲ್ ಪಂದ್ಯ ವಿರುದ್ಧ ಜಯಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.  
ಮೂರನೇ ಶ್ರೇಯಾಂಕಿತ ಭಾರತೀಯ ಜೋಡಿ, ಎದುರಾಳಿ ಜೋಡಿಯ ವಿರುದ್ಧ 35 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 21-19 21-16 ಅಂತರದಿಂದ ಜಯಗಳಿಸಿದೆ.
 
ಜ್ವಾಲಾ ಮತ್ತು ಅಶ್ವಿನಿ ಜೋಡಿ 19-19 ಅಂಕಗಳಿಸಿದ್ದಾಗ ಗೇಮ್ ಪಾಯಿಂಟ್‌ ಅವಕಾಶವನ್ನು ಬಳಸಿಕೊಂಡು ಪಂದ್ಯದಲ್ಲಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದರು. 
 
ಆದಾಗ್ಯೂ, ಮುಸ್ಕೆನ್ಸ್ ಮತ್ತು ಪೈಯಿಕ್ ಜೋಡಿ ಒಂಬತ್ತು ನೇರ ಪಾಯಿಂಟ್‌ಗಳ ಮುನ್ನಡೆ ಸಾಧಿಸಿ 15-15 ಸರಾಸರಿಗೆ ತಂದಿಟ್ಟರು. ಆದರೆ, ಭಾರತೀಯ ಜೋಡಿಯಾದ ಜ್ವಾಲ ಮತ್ತು ಅಶ್ವಿನಿ 7 ಪಾಯಿಂಟ್‌ಗಳಲ್ಲಿ ಆರು ಪಾಯಿಂಟ್‌ಗಳನ್ನು ಗೆಲ್ಲುವ ಮೂಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. 
 
ಕಳೆದ 2012ರ ಒಲಿಂಪಿಕ್ಸ್ ಪಂದ್ಯಾವಳಿಯ ನಂತರ ಜ್ವಾಲಾ ಮತ್ತು ಅಶ್ವಿನಿ ಜೋಡಿ ಮೊದಲ ಬಾರಿಗೆ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
 

ವೆಬ್ದುನಿಯಾವನ್ನು ಓದಿ