ಮುಂಬೈ ಮಳೆ: ರಕ್ಷಣೆಗಾಗಿ ಗಂಡನ ಗ್ರಾನ್ ಸ್ಲಾಮ್ ಟವಲ್ ಬಳಸಿದ ಮಹೇಶ್ ಭೂಪತಿ ಪತ್ನಿ
12 ಗ್ರಾನ್ ಸ್ಲಾಮ್ ಪ್ರಶಸ್ತಿಗಳ ಒಡೆಯ ಮಹೇಶ್ ಭೂಪತಿ ತಾವು ಗ್ರಾನ್ ಸ್ಲಾಮ್ ಟೂರ್ನಿಗಳಾಡುವಾಗ ಬಳಸಿದ್ದ ಟವೆಲ್ ಗಳನ್ನು ಪತ್ನಿ ಲಾರಾ ನೀರು ತಡೆಯಲು ಅಡ್ಡ ಗೋಡೆಯಾಗಿ ಬಳಸಿದ್ದಾರೆ. ಗಾಜಿನ ಕಿಟಿಕಿಗಳಿಗೆ ಇವುಗಳನ್ನು ಅಡ್ಡ ಇಟ್ಟು ಮನೆಯೊಳಗೆ ನೀರು ಬರದಂತೆ ತಡೆದಿದ್ದಾರೆ.
ಇದನ್ನು ಲಾರಾ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಟ್ವಿಟರ್ ನಲ್ಲಿ ಬೇಸರದಿಂದಲೇ ಪ್ರತಿಕ್ರಿಯಿಸಿರುವ ಭೂಪತಿ ನೀರು ನನ್ನನ್ನು ಅಣಕಿಸುತ್ತಿದ್ದೀಯಾ? ಅವೆಲ್ಲ ಕಠಿಣ ಪರಿಶ್ರಮದ ಫಲಗಳು ಎಂದಿದ್ದಾರೆ.