ಶೂ ಖರೀದಿಸಲೂ ದುಡ್ಡು ಇಲ್ಲದವಳು ವಿಶ್ವ ಬಾಕ್ಸಿಂಗ್ ಚಾಂಪಿಯನ್

ಸೋಮವಾರ, 25 ಮೇ 2015 (16:46 IST)
ಪಂಜಾಬ್‌ನ ಬಾಲಕಿ ಮಂದೀಪ್ ಕೌರ್ ಸಾಂಧು ತೈಪೆಯಲ್ಲಿ ನಡೆದ  ಮಹಿಳಾ ವಿಶ್ವ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ 52 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಶನಿವಾರ ಎರಡು ಚಿನ್ನದ ಪದಕಗಳನ್ನು ಗೆದ್ದುಕೊಳ್ಳುವ ಮೂಲಕ ಚಿಂದಿಯಿಂದ ಶ್ರೀಮಂತಿಕೆ ಗಳಿಸಿ  ಕಥಾವಸ್ತುವಾಗಿದ್ದಾಳೆ. 
 
 ಚಕ್ಕಾರ್ ಗ್ರಾಮಕ್ಕೆ ಸೇರಿದ 15 ವರ್ಷ ವಯಸ್ಸಿನ ಮಂದೀಪ್,  ಐರ್ಲೆಂಡ್ ನಿಯಾಮ ಅರ್ಲಿ ಅವರನ್ನು ಫೈನಲ್ ಪಂದ್ಯದಲ್ಲಿ 3-0 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದರು. ಪಂದ್ಯಾವಳಿಯುದ್ದಕ್ಕೂ ಮೇಲುಗೈ ಸಾಧಿಸಿದ ಮಂದೀಪ್ ಕೆಲವು ರೋಮಾಂಚಕ ಜಯಗಳನ್ನು ಸ್ಥಾಪಿಸಿದರು. 
 
ಸರ್ಕಾರಿ ಹಿರಿಯ ಪ್ರೌಢ ಶಾಲೆ ಚಕ್ಕರ್‌ನಲ್ಲಿ ಹ್ಯುಮಾನಿಟೀಸ್ ಓದುತ್ತಿದ್ದ ಅವರು 7ನೇ ವರ್ಷದಿಂದಲೇ ಕ್ರೀಡೆ ಆಡಲಾರಂಭಿಸಿದ್ದರು. ಮಂದೀಪ್ ಸೋದರ(ಹವ್ಯಾಸಿ ಬಾಕ್ಸರ್)ನ ಜತೆ ಚಕ್ಕಾರ್‌ನ ಶೇರ್ ಎ ಪಂಜಾಬ್ ಸ್ಫೋರ್ಟ್ ಅಕಾಡೆಮಿಗೆ ಜತೆಗೂಡುತ್ತಿದ್ದಳು. ಅವನ  ಅಭ್ಯಾಸವನ್ನು ನೋಡಿ ಅವನ ಹೆಜ್ಜೆಗುರುತನ್ನು ಬಾಲಕಿ ಅನುಸರಿಸಿ, ಬಾಕ್ಸಿಂಗ್ ಟ್ರಿಕ್‌ಗಳನ್ನು ಕಲಿತಳು. 
 
ದೀಪ್ ಅಭ್ಯಾಸದ ಸೆಷನ್‌ಗಳನ್ನು ಎಂದಿಗೂ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಅವಳು ತರಬೇತಿ ಸೆಷನ್ ಆರಂಭಿಸುತ್ತಿದ್ದಳು.
ಮನೆಯಲ್ಲಿ ಎಷ್ಟೊಂದು ಬಡತನವಿತ್ತೆಂದರೆ, ತರಬೇತಿ ಉಪಕರಣ ಅಥವಾ ಗ್ಲೌಸ್ ಖರೀದಿಗೆ ಹಣ ಪಾವತಿ ಮಾಡಲು ಮಂದೀಪ್ ತಂದೆಯ ಬಳಿ ಹಣವಿರಲಿಲ್ಲ.  ನಂತರ ಶೇರ್ ಎ ಪಂಜಾಬ್ ಕ್ರೀಡಾ ಅಕೆಡಮಿ ಅವಳಿಗೆ ನೆರವಾಯಿತು. ಮಂದೀಪ್ ಸಾಧನೆಗೆ ಅಕಾಡೆಮಿ ಮುಖ್ಯಸ್ಥ ಬಲವಂತ್ ಸಿಂಗ್ ಮೆಚ್ಚುಗೆ ಸೂಚಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ