ಭಾರತದವರೇ ಆದ ಆದಿತ್ಯ ಮೆಹ್ತಾ ವಿರುದ್ದ 6-1ರಲ್ಲಿ ಸೆಮಿಫೈನಲ್ ಜಯಗಳಿಸಿದ ಅಡ್ವಾಣಿ ಮೊದಲ ಫ್ರೇಂನಲ್ಲಿ ಚುರುಕಿನ ಆಟವಾಡಿ 39-4ರಲ್ಲಿ ಗೆಲುವು ಗಳಿಸಿದರು. ಎರಡನೇ ಫ್ರೇಮಿನಲ್ಲಿ 6-51ರಿಂದ ಸೋತು ನಿರಾಸೆ ಮೂಡಿಸಿದರೂ ಮೂರನೇ ಫ್ರೇಂ ಅನ್ನು 40-14ರಿಂದ ಗೆದ್ದುಕೊಂಡು ನಾಲ್ಕನೇ ಫ್ರೇಂ 37-0ಯಲ್ಲಿ ಸೋತರು. 5 ಮತ್ತು 6ನೇ ಫ್ರೇಮನ್ನು 41-7ಮತ್ತು 44-8ರಿಂದ ಕ್ರಮವಾಗಿ ಗೆದ್ದುಕೊಂಡರು.ಅಡ್ವಾಣಿ ಕೊನೆಯ ಫ್ರೇಮನ್ನು 53-24ರಿಂದ ಗೆದ್ದು, ಪ್ರಶಸ್ತಿಯನ್ನು 7-5 ರಿಂದ ಬಾಚಿಕೊಂಡರು.