ಆಸೀಸ್ ದಾಳಿಗೆ ಮಕಾಡೆ ಮಲಗಿದ ಟೀಮ್ ಇಂಡಿಯಾ

ಶುಕ್ರವಾರ, 24 ಫೆಬ್ರವರಿ 2017 (17:51 IST)
ಪುಣೆಯಲ್ಲಿ ನಡೆಯುತ್ತಿರುವ ಭಾರತ=ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಹೀನಾಯ ಸ್ಥಿತಿಯಲ್ಲಿದೆ. ಮೊದಲ ಇನ್ನಿಂಗ್ಸ್`ನಲ್ಲಿ ಕೇವಲ 105 ರನ್`ಗಳಿಗೆ ಆಲೌಟ್ ಆಗುವ ಮೂಲಕ ಭಾರತ ಹಿನ್ನಡೆ ಅನುಭವಿಸಿದೆ. 2ನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ 2ನೇ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 143 ರನ್ ಗಳಿಸಿದ್ದು ಒಟ್ಟಾರೆ 298 ರನ್  ಮುನ್ನಡೆಯಲ್ಲಿದೆ.


ನಿನ್ನೆ ದಿನದಾಟದಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿದ್ದ ಆಸೀಸ್ 4 ರನ್ ಸೇರಿಸುವಷ್ಟರಲಲ್ಲಿ ಆಲೌಟ್ ಆಯಿತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ರಾಹುಲ್ ಮತ್ತು ವಿಜಯ್ ಉತ್ತಮ ಆರಂಭ ನೀಡಿದರು. ರಾಹುಲ್ 64 ರನ್ ಗಳಿಸಿದರೆ ವಿಜಯ್ 10 ರನ್ ಗಳಿಸಿ ಔಟಾದರು. ಬಳಿಕ ನಡೆದದ್ದು ಭಾರತದ ಪೆವಿಲಿಯನ್ ಪರೇಡ್.

ಒಂದೆಡೆ ರಾಹುಲ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರೆ ಮತ್ತೊಂದೆಡೆ ವಿಕೆಟ್ ಉರುಳುತ್ತಿದ್ದವು. ವಿರಾಟ್ ಕೊಹ್ಲಿ ಸೊನ್ನೆ ಸುತ್ತಿದ್ದೂ ಸೇರಿ 9 ಬ್ಯಾಟ್ಸ್`ಮನ್`ಗಳು ಒಂದಂಕಿ ದಾಟಲಿಲ್ಲ. ರಹಾನೆ, ಜಡೇಜಾ, ಪೂಜಾರ, ಜಡೇಜಾ ಯಾರೊಬ್ಬರೂ ಅಸೀಸ್ ದಾಳಿ ಎದುರು ನಿಲ್ಲಲಾಗಲಿಲಲ. 35 ರನ್ ನೀಡಿ 6 ವಿಕೆಟ್ ಕಬಳಿಸಿದ ಎಸ್`ಎನ್`ಜೆ ಓ ಕೀಫೆ ಭಾರತದ ಬ್ಯಾಟಿಂಗ್ ಪಡೆಯನ್ನ ಧೂಳೀಪಟ ಮಾಡಿದರು.

ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ: 260 ಮತ್ತು 2ನೇ ದಿನದಾಟದಂತ್ಯಕ್ಕೆ 143/4
ಭಾರತ: 105ಕ್ಕೆ ಆಲೌಟ್
ಎಸ್`ಎನ್`ಜೆ ಓ ಕೀಫೆ : 35/6

ವೆಬ್ದುನಿಯಾವನ್ನು ಓದಿ