ಬೌಲರ್ ಗಳ ಮೇಲಾಟದಲ್ಲಿ ಉತ್ತರ ಪ್ರದೇಶದಲ್ಲಿ ಆಲೌಟಾಗಿ ಮಾಡಿ ಮಹತ್ವದ ಮುನ್ನಡೆ ಪಡೆದ ಕರ್ನಾಟಕ ತಂಡ ಎರಡನೇ ಇನಿಂಗ್ಸ್ ನಲ್ಲಿ ಉತ್ತರ ಪ್ರದೇಶ ಬೌಲರ್ ಗಳ ತಿರುಗೇಟಿಗೆ ತತ್ತರಿಸಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದೆ.
ಬೆಂಗಳೂರಿನ ಆಲೂರು ಮೈದಾನದಲ್ಲಿ ನಡೆಯುತ್ತಿರುವ ಕ್ವಾರ್ಟರ್ ಫೈನಲ್ ಪಂದ್ಯದ ೨ನೇ ದಿನವಾದ ಮಂಗಳವಾರ ಬೌಲರ್ ಗಳ ಮೇಲಾಟದಲ್ಲಿ ಒಂದೇ ದಿನ 21 ವಿಕೆಟ್ ಉರುಳಿದವು. 213 ರನ್ ಗೆ 7 ವಿಕೆಟ್ ಕಳೆದುಕೊಂಡು ಮೊದಲ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ 253 ರನ್ ಗಳಿಗೆ ಆಲೌಟಾಯಿತು.
ಮೊದಲ ಇನಿಂಗ್ಸ್ ಆರಂಭಿಸಿದ ಉತ್ತರ ಪ್ರದೇಶ 155 ರನ್ ಗಳಿಗೆ ಪತನಗೊಂಡಿತು. 58 ರನ್ ಗಳ ಮುನ್ನಡೆ ಪಡೆದ ಕರ್ನಾಟಕ ತಂಡ ದಿನದಾಂತ್ಯಕ್ಕೆ ಎರಡನೇ ಇನಿಂಗ್ಸ್ ನಲ್ಲಿ 8 ವಿಕೆಟ್ ಕಳೆದುಕೊಂಡು 100 ರನ್ ಗಳಿಸಿದ್ದು, ಒಟ್ಟಾರೆ 198 ರನ್ ಗಳ ಮಹತ್ವದ ಮುನ್ನಡೆ ಪಡೆದಿದೆ.
ಕರ್ನಾಟಕದ ಪರ ಮಯಾಂಕ್ ಅಗರ್ ವಾಲ್ 22 ರನ್ ಗಳಿಸಿದರೆ, ಉತ್ತರ ಪ್ರದೇಶದ ಪರ ಸೌರಭ್ ಕುಮಾರ್ 3 ವಿಕೆಟ್ ಪಡೆದು ಮಿಂಚಿದರು.